ಬಿಡೆನ್ ಮುಡಿಗೆ `ಶ್ವೇತ’ ಕಿರೀಟ : ಭಾರತಕ್ಕಾಗುವ ಲಾಭಗಳೇನು..?
ಜಗತ್ತಿನ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇದರಿಂದಾಗಿ ಅಮೆರಿಕದಾದ್ಯಂತ ಸಂಭ್ರಮ ಮನೆ ಮಾಡಿದೆ. ಇನ್ನೊಂದೆಡೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಕೂಡ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದು, ಅಲ್ಲಿನ ಭಾರತೀಯರೂ ಕೂಡ ಸಂಭ್ರಮಿಸುತ್ತಿದ್ದಾರೆ.
ಇತ್ತ ಬಿಡೆನ್ ಅಮೆರಿಕಾದ ಅಧ್ಯಕ್ಷರಾಗಿರುವುದಿಂದ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಹೇಗಿರಬಹುದು..? ಅವರ ಆಯ್ಕೆಯಿಂದ ಭಾರತಕ್ಕೆ ಆಗುವ ಲಾಭಗಳೇನು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.
ರಾಜತಾಂತ್ರಿಕ ವಿಭಾಗದಲ್ಲಿ ನಾಲ್ಕು ದಶಕಗಳ ಅನುಭವ ಇರುವ ಬಿಡೆನ್, ಅತೀ ಮುಖ್ಯವಾಗಿ ಭಾರತದ ದೀರ್ಘಕಾಲದ ಕನಸಾಗಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಬಿಡೆನ್ ಬೆಂಬಲ ನೀಡುವ ಸಾಧ್ಯತೆಗಳಿವೆ.
ಜೊತೆಗೆ ಭಯೋತ್ಪಾದನೆ ನಿರ್ಮೂಲನೆಗೆ ಸಹಕಾರ, ಆರೋಗ್ಯ ಹಾಗೂ ವ್ಯಾಪಾರ ವಿಷಯಗಳಲ್ಲಿ ಭಾರತಕ್ಕೆ ಬೆಂಬಲ ನೀಡುವ ಸಾಧ್ಯತೆಗಳಿವೆ. ಅಲ್ಲದೇ ಬಿಡೆನ್ ಅವರ ಆಡಳಿತ ಹೆಚ್-1 ಬಿ ವೀಸಾ ಸುಧಾರಣೆಗಳಿಗೆ ಕೈ ಹಾಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯುಎಸ್ ಅಧ್ಯಕ್ಷೀಯ ಚುನಾವಣೆ – ಜೋ ಬಿಡೆನ್ ಮುಂದಿನ ಅಮೆರಿಕ ಅಧ್ಯಕ್ಷ
ಸದ್ಯ ಟ್ರಂಪ್ ವಿರುದ್ಧ ಜೋ ಬಿಡೆನ್ ಭರ್ಜರಿ ಜಯ ಸಾಧಿಸಿದ್ದು, ಅವರ ನೇತೃತ್ವದ ಸರ್ಕಾರ ಅಧಿಕಾರ ಬಂದ ಕೂಡಲೇ 5 ಲಕ್ಷ ಭಾರತೀಯರು ಸೇರಿ 11 ದಶಲಕ್ಷ ವಲಸಿಗರಿಗೆ ಅಮೆರಿಕನ್ ಪೌರತ್ವ ನೀಡುವುದಕ್ಕೆ ಕ್ರಮ ತೆಗೆದುಕೊಳ್ಳಲಿದೆ.
ಇದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬಿಡೆನ್ ಅವರು ಕಾಂಗ್ರೆಸ್ ಜತೆಗೆ ಶೀಘ್ರವೇ ಕೆಲಸ ಶುರುಮಾಡಲಿದ್ದಾರೆ ಎಂದು ಬಿಡೆನ್ ಕ್ಯಾಂಪೇನ್ ನ ಪಾಲಿಸಿ ಡಾಕ್ಯುಮೆಂಟ್ ತಿಳಿಸಿದೆ.
ಅಂದಹಾಗೆ ಬಿಡೆನ್ ಅವರು 2006 ರಲ್ಲಿ ಅಮೆರಿಕಾದಲ್ಲಿದ್ದ ಭಾರತೀಯ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ” 2020 ರಲ್ಲಿ ಭಾರತ-ಅಮೆರಿಕ ಎರಡೂ ವಿಶ್ವದ ಅತ್ಯಂತ ಆಪ್ತ ರಾಷ್ಟ್ರಗಳಾಗುವುದು ನನ್ನ ಕನಸು, ಅದು ಸಾಧ್ಯವಾದರೆ ಇಡೀ ವಿಶ್ವ ಸುರಕ್ಷಿತವಾಗಿರಲಿದೆ ಎಂದು ಹೇಳಿದ್ದರು.
ಬಿಡೆನ್ ಮುಡಿಗೆ `ಶ್ವೇತ’ ಕಿರೀಟ : ಭಾರತಕ್ಕಾಗುವ ಲಾಭಗಳೇನು..?
ಈ ಹಿಂದೆ 2008 ರಲ್ಲಿ ಅಮೆರಿಕ-ಭಾರತ ನ್ಯೂಕ್ಲಿಯರ್ ಅಗ್ರಿಮೆಂಟ್ ನಡೆದಾಗ ವಿದೇಶಾಂಗ ಸಂಬಂಧಗಳ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಭಾರತ ಮೊದಲ ಬಾರಿಗೆ ಅಮೆರಿಕ ನಿರ್ಮಾಣದ ವಾರ್ ಶಿಪ್- ಐಎನ್‍ಎಸ್ ಜಲಾಶ್ವವನ್ನು ಖರೀದಿಸಿದಾಗ 2005 ರ ನೌಕಾ ಹಡಗುಗಳ ವರ್ಗಾವಣೆ ಕಾಯ್ದೆಯಲ್ಲಿ ಕೋ-ಸ್ಪಾನ್ಸರ್ ಆಗಿಯೂ ಜೋ ಬೈಡನ್ ಕಾರ್ಯನಿರ್ವಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel