ಬೈಡನ್ ಪದಗ್ರಹಣ ಸಮಾರಂಭದ ಭಾಷಣ ತಯಾರಿಸಿದ್ದು ಭಾರತೀಯ ಮೂಲದ ವಿನಯ್ ರೆಡ್ಡಿ..!
ಅಮೆರಿಕಾ: ವಿಶ್ವದ ದೊಡ್ಡಣ್ಣ ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೊ ಬೈಡನ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇಂದು ಅವರ ಪದಗ್ರಹಣದ ಅದ್ಧೂರಿ ಸಮಾರಂಭಕ್ಕೆ ಭಾಷಣ ತಯಾರಿಸಿರುವುದು ನಮ್ಮ ಭಾರರತೀಯ ಮೂಲದವರಾಗಿದ್ದಾರೆ. ಹೌದು 12 ಗಂಟೆ ಸುಮಾರಿಗೆ ಅಧಿಕಾರ ಸ್ವೀಕರಿಸಲಿರುವ ಬೈಡೆನ್ ಬಳಿಕ ದೇಶದ ಜನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಒಂದಾಗಿದೆ, ಒಗ್ಗಟ್ಟಾಗಿದೆ ಎಂಬ ಮೂಲ ಧ್ಯೇಯವಾಕ್ಯದೊಂದಿಗೆ ಜೊ ಬೈಡನ್ 20ರಿಂದ 30 ನಿಮಿಷಗಳ ಕಾಲ ಮಾತನಾಡಲಿದ್ದಾರೆ. ಜೊ ಬೈಡನ್ ಅವರ ಭಾಷಣವನ್ನು ತಯಾರು ಮಾಡಿದವರು ಭಾರತೀಯ ಮೂಲದ ವಿನಯ್ ರೆಡ್ಡಿ. ಓಹಿಯೊದ ಡೇಟನ್ ನಲ್ಲಿ ಬೆಳೆದ ವಿನಯ್ ರೆಡ್ಡಿ ಅವರು 2013ರಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಕೂಡ ವಿನಯ್ ರೆಡ್ಡಿಯವರು ಬರೆದುಕೊಟ್ಟ ಭಾಷಣವನ್ನೇ ಓದಿದ್ದರು. ಅಷ್ಟೇ ಅಲ್ಲ ಮತ್ತೊಂದು ವಿಚಾರ ಎಂದ್ರೆ ಅಮೆರಿಕಾ ಅಧ್ಯಕ್ಷರಿಗೆ ಭಾಷಣ ಪ್ರತಿಯನ್ನು ಬರೆದುಕೊಡುತ್ತಿರುವ ಮೊದಲ ಭಾರತೀಯರೂ ಕೂಡ ಹೌದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








