ಆಕ್ಷನ್ ಪ್ರಿನ್ಸ್ `ಧ್ರುವ ಸರ್ಜಾ’ಗೆ `ಜೋಗಿ ಪ್ರೇಮ್’ ಆಕ್ಷನ್ ಕಟ್
ಬೆಂಗಳೂರು : ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್, ಪಡ್ಡೆ ಹೈಕ್ಳ ಮಾಸ್ ಮಹಾರಾಜ ಧ್ರುವ ಸರ್ಜಾ ಅವರಿಗೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಗಾಂಧಿನಗದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸದ್ಯ ಮಾಸ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಆಗಿರುವ ಧ್ರುವ ಸರ್ಜಾ, ಇದೀಗ ಪ್ರೇಮ್ ಕಣ್ಣಿಗೆ ಬಿದ್ದಿದ್ದು, ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಿನಿಮಾ ಕುರಿತಂತೆ ಪ್ರೇಮ್ ಮತ್ತು ಧ್ರುವ ಸರ್ಜಾ ಜೊತೆ ಚರ್ಚೆ ನಡೆಸಿದ್ದು, ಈ ಸಿನಿಮಾ ಸೆಟ್ಟೆರುವುದು ಬಹುತೇಕ ಖಚಿತ ಆಗಿದೆ.
ಇನ್ನೂ ಈ ಸಿನಿಮಾಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲು ಮುಂದಾಗಲಿದೆ ಎಂದು ಮೂಲಗಳ ಖಬರ್ ಆಗಿದೆ. ಸದ್ಯ ಜೋಗಿ ಪ್ರೇಮ್ ‘ಏಕ್ ಲವ್ ಯಾ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.
ಇತ್ತ ಧ್ರುವ ಸರ್ಜಾ ಕೂಡ ನಿರ್ದೇಶಕ ಎ.ಪಿ ಅರ್ಜುನ್ ಜೊತೆ ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದು, ಆ.15ರಂದು ಈ ಸಿನಿಮಾದ ಮೂಹೂರ್ತ ನೆರವೇರಲಿದೆ.
ಈ ಎರಡು ಚಿತ್ರಗಳನ್ನು ಮುಗಿಸಿದ ನಂತರ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಒಟ್ಟಿಗೆ ಕೈ ಜೋಡಿಸಲಿದ್ದಾರೆ.