IPL 2022 : ಒಂದೇ ಸೀಸನ್ ನಲ್ಲಿ 2 ಸೆಂಚೂರಿ.. ಹಲವು ದಾಖಲೆಗಳು ಉಡೀಸ್
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜಾಸ್ ಬಟ್ಲರ್ ಐಪಿಎಲ್ 2022 ರಲ್ಲಿ ತಮ್ಮ ಎರಡನೇ ಶತಕವನ್ನು ದಾಖಲಿಸಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ 59 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿದ್ರು.
ರಾಯಲ್ ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಲಾಂಗ್ ಆನ್ ಕಡೆ ಸಿಕ್ಸರ್ ಬಾರಿಸುವ ಮೂಲಕ ಬಟ್ಲರ್ ಸೆಂಚೂರಿ ಸಿಡಿಸಿದರು.
ಅಂದಹಾಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಈ ಋತುವಿನ ಮೊದಲ ಶತಕವನ್ನು ಗಳಿಸಿದರು.
ಈ ಎರಡು ಶತಕಗಳೊಂದಿಗೆ ಹಲವು ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ 2022ರಲ್ಲಿ ಎರಡನೇ ಶತಕ ಸಿಡಿಸಿರುವ ಬಟ್ಲರ್ ಒಟ್ಟಾರೆ ಐಪಿಎಲ್ ನಲ್ಲಿ ಮೂರನೇ ಶತಕ ಸಿಡಿಸಿದ್ದಾರೆ.
ಇದು ಕಳೆದ 23 ಟಿ20 ಇನ್ನಿಂಗ್ಸ್ಗಳಲ್ಲಿ ಬಟ್ಲರ್ ಅವರ ನಾಲ್ಕನೇ ಶತಕವಾಗಿದೆ.
ಬಟ್ಲರ್ ಕಳೆದ ಏಳು ಐಪಿಎಲ್ ಇನ್ನಿಂಗ್ಸ್ಗಳಲ್ಲಿ ಮೂರು ಬಾರಿ ಶತಕ ಸಿಡಿಸಿದ್ದಾರೆ.
ಬಟ್ಲರ್ ಐಪಿಎಲ್ ಅಂಗವಾಗಿ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶತಕ ಸಿಡಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
ಇದಕ್ಕೂ ಮುನ್ನ ಯೂಸುಫ್ ಪಠಾಣ್, ಶೇನ್ ವ್ಯಾಟ್ಸನ್ ಮತ್ತು ಕೆಎಲ್ ರಾಹುಲ್ ಪ್ರಶಸ್ತಿ ಸ್ವೀಕರಿಸಿದ್ದರು.jos-buttler-2nd-century-ipl-2022