ವೇದಾಂತಿಗಳ ಸಂದೇಶವನ್ನು ಇಡೀ ದೇಶದ ಜನರಿಗೆ ಸಾರಿದ್ದು ಬಿಜೆಪಿ – ಜೆ.ಪಿ. ನಡ್ಡಾ
ಪಶ್ಚಮ ಬಂಗಾಳ : ಬಂಗಾಳದ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿರುವುದು ಹಾಗೂ ಸಂರಕ್ಷಿಸುತ್ತಿರುವುದು ಬಿಜೆಪಿ. ರಾಜ್ಯದ ವಿದ್ವಾಂಸರ, ವೇದಾಂತಿಗಳ ಸಂದೇಶವನ್ನು ಇಡೀ ದೇಶದ ಜನರಿಗೆ ತಲುಪಿಸಲು ಕೇಸರಿ ಪಕ್ಷ ಶ್ರಮಿಸಿದೆ.
ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ್ ಠಾಗೂರ್ ಹಾಗೂ ಶ್ಯಾಮ್ಪ್ರಸಾದ್ ಮುಖರ್ಜಿ ಅವರಂಥ ಮಹಾತ್ಮರ ಸಂದೇಶಗಳನ್ನು ಇಡೀ ದೇಶಕ್ಕೆ ಸಾರಿದ್ದು ಬಿಜೆಪಿ ಎಂದು ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹೇಳಿದ್ದಾರೆ.
ಇದೇ ವೇಳೆ ಮಮತಾ ಬ್ಯಾನರ್ಜಿ ಬಂಗಾಳದ ರಾಜಕೀಯದಿಂದ ಹೊರಹೋಗಲು ಗಂಟೆ ಬಾರಿಸಿಯಾಗಿದೆ. ದೇಶದ ಪ್ರಧಾನಿ ಮೋದಿ ಅವರಿಗೆ, ಅಮಿತ್ ಶಾ ಅವರಿಗೆ ತಮ್ಮ ಪ್ರಚಾರ ವೇಳೆ ಮಮತಾ ಬ್ಯಾನರ್ಜಿ ಅವರು ಬಳಸಿದ ಪದಗಳು ಸರಿಯೇ. ಇದು ಬಂಗಾಳದ ಸಂಸ್ಕೃತಿಯೇ. ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಬಂಗಾಳದವರೇ ಆದ ನಾವು ಬಂಗಾಳದ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದೇವೆ. ಬಂಗಾಳದ ಸಂಸ್ಕೃತಿಗೆ ಮಮತಾ ಬ್ಯಾನರ್ಜಿ ಗೌರವ ನೀಡುತ್ತಿಲ್ಲ ಎಂದು ಜಮಲ್ಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದರು. ರಾಜ್ಯದ ಒಳಿತಿಗೆ, ಅಭಿವೃದ್ಧಿಗೆ ನೀವು ಮಮತಾ ಬ್ಯಾನರ್ಜಿಯನ್ನು ಶಾಶ್ವತವಾಗಿ ನಿಷೇಧಿಸಬೇಕಿದೆ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.








