ಕ್ಯಾನ್ಸರ್ ಪೀಡಿತ ಸಹೋದ್ಯೋಗಿಗಾಗಿ ತಲೆ ಕೂದಲನ್ನ ಕತ್ತರಿಸಿಕೊಂಡ ಕ್ಷೌರಿಕ – ಭಾವನಾತ್ಮಕ ವಿಡಿಯೋ ವೈರಲ್..!
ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ನೇಹಿತ ( ಸಹೋದ್ಯೋಗಿ) ಕ್ಷೌರಿಕನೊಬ್ಬ ತನ್ನ ಕೂದಲನ್ನು ಕತ್ತರಿಸಿಕೊಂಡಿರುವ ಬಾವನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿರ ಕಣ್ಣಂಚನ್ನ ಒದ್ದೆಗೊಳಿಸಿದೆ.
ಸ್ಪೇನ್ ನವರಾದ ನೆಫ್ತಾಲಿ ನೆಫ್ತಾಲಿ ಮಾರ್ಟಿನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರೇ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೃತ್ತಿಯಲ್ಲಿ ಕ್ಷೌರಿಕನಾಗಿರುವ ನೆಫ್ತಾಲಿ ಕಿಮೋಥೆರಪಿ ಚಿಕಿತ್ಸೆಯನ್ನ ಪಡೆಯುತ್ತಿದ್ದು ತಮ್ಮ ಕೂದಲನ್ನು ಶೇವ್ ಮಾಡೋಕೆ ಸಹೋದ್ಯೋಗಿ ಜೋಲ್ ಓರ್ಟೆಗಾ ಎಂಬವರ ಬಳಿ ಹೋಗಿದ್ದಾರೆ.
ನೆಫ್ತಾಲಿ ಕೂದಲನ್ನ ತೆಗೆದ ಬಳಿಕ ಅವರ ಸ್ನೇಹಿತರಾದ ಓರ್ಟೆಗಾ ತಮ್ಮ ಕೂದಲನ್ನೂ ಶೇವ್ ಮಾಡಿದ್ದು ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕ್ಯಾನರ್ ವಿರುದ್ಧದ ಹೋರಾಟದಲ್ಲಿ ಸಹೋದ್ಯೋಗಿಗೆ ಬೆಂಬಲ ನೀಡಿದ ಓರ್ಟೆಗಾ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ. ನೆಟ್ಟಿಗರು ಓರ್ಟೆಗಾಗೆ ಹ್ಯಾಟ್ಸ್ ಆಫ್ ಹೇಳ್ತಿದ್ದಾರೆ.
‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್ ಗೆ ಬೆಂಕಿಯಿಟ್ಟ ಕಿಡಗೇಡಿಗಳು..!
ಬೆಳಗಾವಿ : ಸಿಎಂ ಬಿಎಸ್ ವೈ ಗೆ ಸುಸ್ತು ಜ್ವರ – ಹೋಟೆಲ್ ನಲ್ಲಿ ವಿಶ್ರಾಂತಿ..!
ಸತತ 15 ದಿನಗಳ ಬಳಿಕ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ..!
ಲಾಕ್ ಡೌನ್ ಫಿಕ್ಸ್..? ಭಾರತದಲ್ಲಿ ಕೊರೊನಾ ಮಹಾಸ್ಫೋಟ – 2 ಲಕ್ಷಕ್ಕೂ ಅಧಿಕ ಕೇಸ್ ಪತ್ತೆ – 1038 ಸಾವು..!
ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ TIKTOK – ಸಂಸ್ಥಾಪಕ..!