Jr NTR Prashanth Neel Movie Title | ಪ್ರಶಾಂತ್ ನೀಲ್.. ಎನ್ ಟಿಆರ್ ಸಿನಿಮಾದ ಟೈಟಲ್ ಏನು..?
‘ಜೈ ಲವ ಕುಶ’ ಸಿನಿಮಾದ ‘ಅಸುರ ಅಸುರ ಅಸುರ ಅಸುರ .. ರಾವಣಾಸುರ ..’ ಹಾಡು ಸೂಪರ್ ಹಿಟ್ ಆಗಿತ್ತು.
ಈ ಹಾಡಿನಲ್ಲಿ ಎನ್ ಟಿಆರ್ ವಿಲನ್ ಲುಕ್ ನಲ್ಲಿ ಮಿಂಚಿದರು.
ಇದೀಗ ಮತ್ತೊಮ್ಮೆ ಆ ಅಸುರ ಹೆಸರು ಮುನ್ನಲೆಗೆ ಬಂದಿದೆ.
ಮೇ 20 ರಂದು ಜ್ಯೂನಿಯರ್ ಎನ್ ಟಿಆರ್ ಬರ್ತ್ ಡೇ ಅಂಗವಾಗಿ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿದೆ.

ಇದರಲ್ಲಿ ಒಂದು ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ.
ಮತ್ತೊಂದನ್ನು ಪ್ರಶಾಂತ್ ನೀಲ್ ನಿರ್ದೇಶಿಸಲಿದ್ದಾರೆ.
ಮೊದಲು ಕೊರಟಾಲ ಶಿವ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ.
ಇದಾದ ಬಳಿಕ ಮುಂದಿನ ವರ್ಷ ಏಪ್ರಿಲ್ ನಿಂದ ಎನ್ ಟಿಆರ್-ಪ್ರಶಾಂತ್ ಸಿನಿಮಾ ಸೆಟ್ಟೇರಲಿದೆ ಎಂದು ಟಾಕ್.
ಈ ಚಿತ್ರಕ್ಕೆ ‘ಅಸುರ’ ಅಥವಾ ‘ಅಸುರುಡು’ ಎಂಬ ಟೈಟಲ್ ಫಿಕ್ಸ್ ಮಾಡಲು ಚಿತ್ರತಂಡ ಮುಂದಾಗಿದೆ.
ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದರೂ, ಟಾಲಿವುಡ್ ನಲ್ಲಿ ಈ ಟೈಟಲ್ ಭಾರಿ ಸದ್ದು ಮಾಡುತ್ತಿದೆ.








