ವಿವಾದಿತ ಪೋಸ್ಟ್ ಹಾಕಿದ್ದ ಅಭಿಷೇಕ್ ಗೆ ನ್ಯಾಯಾಂಗ ಬಂಧನ
ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಮಾಡಿದ್ದ ಅಭಿಷೇಕ್ ಗೆ 14 ದಿನ ನ್ಯಾಯಾಂಗ ಬಂಧನದಲ್ಲಿಡುವಂತೆ ಹುಬ್ಬಳ್ಳಿ ಜೆಎಂಎಫಸಿ ನ್ಯಾಯಾಲಯ ಆದೇಶಿಸಿದೆ.
ಅಭಿಷೇಕ್‍ನನ್ನು ಏಪ್ರಿಲ್ 30 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿಸದ್ದು, ಅಭಿಷೇಕ್ ಹಿರೇಮಠ ಪರ ವಕೀಲರ ಸಂಜಯ ಬಡಾಸಕರ್ ಜಾಮೀನು ಅರ್ಜಿ ಸಲ್ಲಿಸಿದರು. ನಾಳೆ ಸರ್ಕಾರ ಪರ ವಕೀಲರು ಜಾಮೀನಿಗೆ ತಕರಾರು ಸಲ್ಲಿಸಲಿದ್ದಾರೆ.
ಇನ್ನೂ ಅಭಿಷೇಕ್ ಪಿಯುಸಿ 2 ನೇ ವರ್ಷದ ಪರೀಕ್ಷೆ ಬರೆಯಲಿರುವ ಕಾರಣ ನ್ಯಾಯಾಲಯಕ್ಕೆ ಇದನ್ನ ಗಮನಕ್ಕೆ ತಂದಿದ್ದೆವೆ, ನಾಳೆ ಈ ಬಗ್ಗೆ ಅರ್ಜಿ ಕೂಕ ಕೊಡಲಿದ್ದೆವೆ ಎಂದು ವಕೀಲರು ತಿಳಿಸಿದರು.
ಗಲಭೆ ಪ್ರಕರಣ ಸಂಬಂಧ ಖಾಕಿ ತನಿಖೆ ಇಂದು ಮತ್ತಷ್ಟು ಚುರುಕಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಗಲಾಟೆ ಮಾಡಿ ಎಸ್ಕೇಪ್ ಆಗಿದ್ದವರ ಹೆಡೆಮುರಿ ಕಟ್ಟೋಕೆ ಎರಡೂ ಟೀಂಗಳು ಕಾರ್ಯಾಚರಣೆ ನಡೆಸಿವೆ. ಗಲಭೆ ಮಾಡಿದ್ದ ಕೆಲ ಪುಂಡರು ಎಸ್ಕೇಪ್ ಆದ ಹಿನ್ನೆಲೆಯಲ್ಲಿ ಅವರ ಪತ್ತೆ ಕಾರ್ಯ ಚುರುಕಾಗಿದೆ.








