IPL : ರಾಹುಲ್ ತುಫಾನ್ ಇನ್ನಿಂಗ್ಸ್ ರೆಕಾರ್ಡ್ಸ್ ಧಗ ಧಗ

1 min read
IPL's KING KL Rahul saaksha tv

IPL's KING KL Rahul saaksha tv

ರಾಹುಲ್ ತುಫಾನ್ ಇನ್ನಿಂಗ್ಸ್ ರೆಕಾರ್ಡ್ಸ್ ಧಗ ಧಗ  

ಬ್ರೆಬೋರ್ನ್ ಅಂಗಳದಲ್ಲಿ ಕೆ.ಎಲ್ ರಾಹುಲ್ ತುಫಾನ್ ಇನ್ನಿಂಗ್ಸ್… ಕ್ರಿಕೆಟ್ ಸುಲ್ತಾನನ ಆಟಕ್ಕೆ ಐಪಿಎಲ್ ದಾಖಲೆಗಳು ಉಡೀಸ್..  ಕನ್ನಡಿಗ ಸಿಡಿಸಿದ್ದು ಕೇವಲ ಸೆಂಚೂರಿಯಲ್ಲ ಹಲವು ಪ್ರಶ್ನೆಗಳಿ ಉತ್ತರ.

ಹೌದು..!!  15ನೇ ಆವೃತ್ತಿಯ ಐಪಿಎಲ್ ನ 26ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚೂರಿ ಸಿಡಿಸಿ ಅಬ್ಬರಿಸಿದ್ದಾರೆ.  ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ ಗಳನ್ನು ರಾಹುಲ್ ಚೆಂಡಾಡಿದರು. ಕೆ.ಎಲ್. ರಾಹುಲ್ ತುಫಾನಿ ಇನ್ನಿಂಗ್ಸ್ ನಲ್ಲಿ ಐದು ಭರ್ಜರಿ ಸಿಕ್ಸರ್, ಒಂಭತ್ತು ಬೌಂಡರಿಗಳಿವೆ. ರಾಹುಲ್ ರ ಈ ಇನ್ನಿಂಗ್ಸ್ ನಿಂದಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಒವರ್ ಗಳಲ್ಲಿ 199 ರನ್ ಗಳಿಸಿತ್ತು.

k l rahul 100 in this 100th IPL match saaksha tv

ಅಂದಹಾಗೆ ಇದು ಕೆ.ಎಲ್. ರಾಹುಲ್ ಅವರಿಗೆ ಐಪಿಎಲ್ ನಲ್ಲಿ ನೂರನೇ ಪಂದ್ಯವಾಗಿತ್ತು. ಈ ಅವಸ್ಮರಣೀಯ ಪಂದ್ಯದಲ್ಲಿ ರಾಹುಲ್ ಶತಕ ಸಿಡಿಸಿದ್ದು, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮೊದಲ ದಾಖಲೆ ಬಗ್ಗೆ ಮಾತನಾಡೋದಾದ್ರೆ ರಾಹುಲ್ ತಮ್ಮ ಇನ್ನಿಂಗ್ಸ್ ನಲ್ಲಿ 86 ರನ್ ಗಳ ಗಡಿ ದಾಟುತ್ತಿದ್ದಂತೆ ಐಪಿಎಲ್ ನಲ್ಲಿ ನೂರನೇ ಪಂದ್ಯದಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲಸಿಸ್ 86 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 69 ರನ್ ಗಳೊಂದಿಗೆ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ.

ಇನ್ನು ಲಕ್ನೋ ಇನ್ನಿಂಗ್ಸ್ 18.5 ಓವರ್ ನಲ್ಲಿ ಕೆ.ಎಲ್.ರಾಹುಲ್, ಟೈಮಲ್ ಮಿಲ್ಸ್ ಬೌಲಿಂಗ್ ನಲ್ಲಿ ಬೌಂಡರಿ ಸಿಡಿಸುವ ಮೂಲಕ ಈ ಆವೃತ್ತಿಯ ಮೊದಲ ಶತಕ ಸಿಡಿಸಿದರು. 56 ಎಸೆತಗಳಲ್ಲಿ ಶತಕ ಸಿಡಿಸಿದ ರಾಹುಲ್ ಐಪಿಎಲ್ ನಲ್ಲಿ ಎರಡು ಶತಕಗಳನ್ನು ಸಿಡಿಸಿದ 2ನೇ ಕ್ಯಾಪ್ಟನ್ ಎನಿಸಿಕೊಂಡರು. ಈ ಹಿಂದೆ ಪಂಜಾಬ್ ತಂಡದ ನಾಯಕರಾಗಿದ್ದಾಗ ರಾಹುಲ್ ಸೆಂಚೂರಿ ಸಿಡಿಸಿದ್ದರು. ಇದಾದ ಬಳಿಕ ಇದೀಗ ಲಕ್ನೋ ತಂಡದ ನಾಯಕರಾಗಿ ಶತಕ ಬಾರಿಸಿದ್ದಾರೆ. ಅಂದಹಾಗೆ ನಾಯಕರಾಗಿ ಐಪಿಎಲ್ ನಲ್ಲಿ ಎರಡು ಶತಕಗಳನ್ನು ಸಿಡಿಸಿದ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿತ್ತು. ಇದೀಗ ರಾಹುಲ್ ಆ ದಾಖಲೆಯನ್ನು ಸರಿಗಟ್ಟಿದ್ದಾರೆ.   

ಕೇವಲ ಈ ದಾಖಲೆ ಮಾತ್ರವಲ್ಲದೇ ಐಪಿಎಲ್ ನಲ್ಲಿ ಒಂದೇ ತಂಡದ ವಿರುದ್ಧ 2 ಶತಕಗಳನ್ನು ಬಾರಿಸಿದ ನಾಲ್ಕನೇ ಬ್ಯಾಟರ್ ಕೆ.ಎಲ್.ರಾಹುಲ್.  ಹೌದು..! ಮುಂಬೈ ವಿರುದ್ಧ ರಾಹುಲ್ ಸಿಡಿಸಿದ 2ನೇ ಶತಕವಿದು. ಈವರೆಗೂ ಈ ಪಟ್ಟಿಯಲ್ಲಿ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಮಾತ್ರ ಸ್ಥಾನ ಪಡೆದಿದ್ದರು. ಇದೀಗ ರಾಹುಲ್ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ.

k l rahul 100 in this 100th IPL match saaksha tv

ಮುಖ್ಯವಾಗಿ ರಾಹುಲ್ ಈ ಸೆಂಚೂರಿ ಮೂಲಕ ಹಲವು ಪ್ರಶ್ನೆ, ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ನಮಗೆಲ್ಲಾ ಗೊತ್ತಿರುವಂತೆ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಕ್ಯಾಪ್ಟನ್ಸಿ ರೇಸ್ ನಲ್ಲಿರುವ ಅಗ್ರ ಆಟಗಾರ. ಮೂರು ಮಾದರಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ರಾಹುಲ್, ವಿರಾಟ್, ರೋಹಿತ್ ಬಳಿಕ ಟೀಂ ಇಂಡಿಯಾ ಬ್ಯಾಟಿಂಗ್ ಸಾಮ್ರಾಟ ಕೂಡ ಹೌದು…! ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್, ರೋಹಿತ್ ಶರ್ಮಾರ ಉತ್ತರಾಧಿಕಾರಿ ಕೆ.ಎಲ್.ರಾಹುಲ್. ಇದೇ ಕಾರಣಕ್ಕೆ ಅವರು ಕ್ಯಾಪ್ಟನ್ಸಿ ರೇಸ್ ನಲ್ಲಿದ್ದಾರೆ. ಆದ್ರೆ ಕೆಲವರ ಪೂರ್ವಗ್ರಹಪೀಡಿತ ಮನಸ್ಥಿತಿಯಿಂದಾಗಿ ರಾಹುಲ್ ಗೆ ಅನ್ಯಾಯವಾಗುತ್ತಿದೆ. ರಾಹುಲ್ ನಾಯಕತ್ವಕ್ಕೆ ನಾಲಾಯಕ್ ಎನ್ನುವವರಿಗೆ ಐಪಿಎಲ್ ನಲ್ಲಿ ಉತ್ತರ ನೀಡುತ್ತಿದ್ದಾರೆ. ಅತ್ತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ, ಇತ್ತ ಬ್ಯಾಟಿಂಗ್ ದರ್ಬಾರ್ ನಡೆಸುತ್ತಿದ್ದಾರೆ.

ಒಟ್ಟಾರೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕನ್ನಡಿಗನ ಬ್ಯಾಟಿಂಗ್ ವೈಭವ ಹೀಗೆ ಮುಂದುವರೆಯಲಿ..    k l rahul 100 in this 100th IPL match         

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd