Friday, June 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ…

ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ದಕ್ಕೆ ನಿಲ್ತಾರೆ, ಸ್ವಂತ ಅಣ್ಣ ತಮ್ಮಂದಿರೇ ಬೇರೆ ಆಗಿ ಹೋಗ್ತಾರೆ. ಹೌದು ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು, ಬಂದಿದೆ ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಅಂದ್ರೆ, ನಾನ್ಯೇಕೆ ಇರಬೇಕು, ಇವರ ಜೊತೆ ನಾನಿನ್ನು ಪಕ್ಷನೇ ಬಿಟ್ಟು ಹೋಗಿಲ್ಲ. ಚಾಕು, ಚೂರಿ ಹಾಕಿ ಹೋದ ಅಂತ ಇವರು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸ ? ಅದರಿಂದ ಭಿನ್ನಾಭಿಪ್ರಾಯ ಬಂತು, ಭಿನ್ನಾಭಿಪ್ರಾಯ ನಾನೇಕು ಮಾಡ್ಕೊಂಡಿಲ್ಲ ಎಂದು ಶಿವಲಿಂಗೆ ಗೌಡ್ರು ದಳಪತಿ ನಾಯಕರಿಗೆ  ತಿರುಗೇಟು ನೀಡಿದ್ದಾರೆ. 

Naveen Kumar B C by Naveen Kumar B C
March 16, 2023
in Uncategorized
Shivalinge gowda
Share on FacebookShare on TwitterShare on WhatsappShare on Telegram

K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ…

ಈಗಾಗಲೇ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿರುವ  ಹಾಸನ ಅರಸೀಕೆರೆ ಶಾಸಕರಾದ   ಕೆ ಎಂ ಶಿವಲಿಂಗೇಗೌಡ ಅವರು   ಸಾಕಷ್ಟು ದಿನಗಳಿಂದ ಒಳಗಡೆಯಿಂದ ಇಟ್ಟುಕೊಂಡಿದ್ದ  ಸಿಟ್ಟನ್ನ ಇಂದು ಹೊರ ಹಾಕಿದ್ದಾರೆ.

ರಾಜಕೀಯದಲ್ಲಿ ಸ್ವಂತ ಅಣ್ಣ ತಮ್ಮಂದಿರೇ ಯುದ್ದಕ್ಕೆ ನಿಲ್ತಾರೆ, ಸ್ವಂತ ಅಣ್ಣ ತಮ್ಮಂದಿರೇ ಬೇರೆ ಆಗಿ ಹೋಗ್ತಾರೆ. ಹೌದು ನಮಗೂ ಅವರಿಗೂ ಭಿನ್ನಾಭಿಪ್ರಾಯ ಬಂತು, ಬಂದಿದೆ ಎಲ್ಲರಿಗೂ ಗೊತ್ತಿದೆ. ಏಕಾಏಕಿ ಒಂದು ಸಭೆಯಲ್ಲಿ ನಾನು ಗಿಜಿಹಳ್ಳಿ ತೋಟದಲ್ಲಿ ಪರಿಹಾರ ಕೊಡಿಸಲು ಮಲಗಿದ್ದೆ, ಇವನು ನಾಟಕಕ್ಕೆ ಮಲಗಿದ್ದ ಅಂದ್ರೆ, ನಾನ್ಯೇಕೆ ಇರಬೇಕು, ಇವರ ಜೊತೆ ನಾನಿನ್ನು ಪಕ್ಷನೇ ಬಿಟ್ಟು ಹೋಗಿಲ್ಲ. ಚಾಕು, ಚೂರಿ ಹಾಕಿ ಹೋದ ಅಂತ ಇವರು ಮಾತನಾಡಿದ್ರೆ ಅವರ ಜೊತೆ ನನಗೇನು ಕೆಲಸ ? ಅದರಿಂದ ಭಿನ್ನಾಭಿಪ್ರಾಯ ಬಂತು, ಭಿನ್ನಾಭಿಪ್ರಾಯ ನಾನೇಕು ಮಾಡ್ಕೊಂಡಿಲ್ಲ ಎಂದು ಶಿವಲಿಂಗೆ ಗೌಡ್ರು ದಳಪತಿ ನಾಯಕರಿಗೆ  ತಿರುಗೇಟು ನೀಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಐದು ಕೋಟಿ ಕೊಡ್ತಿನಿ ಲೆಹರ್ ಸಿಂಗ್‌ಗೆ ಓಟು ಹಾಕಿದ್ರೆ ಅಂದ್ರು ನನ್ನ ಜೀವನದಲ್ಲಿ ಯಾರಿಗೂ ಮಾನ ಮರ್ಯಾದೆ ಮಾರ್ಕಂಡು ಜೀವನ ಮಾಡಿಲ್ಲ. ಇವತ್ತು ಕರ್ನಾಟಕ ರಾಜ್ಯದಲ್ಲಿ ಶಿವಲಿಂಗೇಗೌಡ ಅಂದ್ರೆ ಒಂದು ಹೆಸರಿದೆ. ಭಿನ್ನಾಭಿಪ್ರಾಯ ಬಂತು ಬೇರೆ ಆಗಿ ಬಿಟ್ಟಿದ್ದೀವಿ, ನೀವು ಬೇರೆ ಹೋಗಿದ್ದೀರಿ, ನಿಮ್ಮ ಪಕ್ಷ ಕಟ್ಕಂಡಿದ್ದೀರಿ,  ನನಗೆ ನನ್ನ ಕ್ಷೇತ್ರದ ಐದಾರು ಸಾವಿರ ಜನ ಸೇರಿ, ಇಲ್ಲಾ ನೀನು ಈ ಸಾರಿ ಕಾಂಗ್ರೆಸ್‌ಗೆ ಹೋಗಬೇಕು ಅಂತ ಕೂಗಿದ್ರು ನಾನು ಜನ ಏನು ಹೇಳಿದ್ರು ಅದರಂತೆ ನಾನು ಕಾಂಗ್ರೆಸ್‌ಗೆ ಹೋಗುವಂತ ಕೆಲಸ ಮಾಡಿದ್ದೇನೆ. ಆದರೆ ನೀವು ಈ ರೀತಿ ಮಾಡುವುದು, ಸುಮ್ಮನೆ ಏನೇನು ಹೇಳುವುದು ತರವಲ್ಲ. ನಿಮ್ಮ ಪಾಡಿಗೆ ನೀವು ಇರಿ, ನಮ್ಮ ಪಾಡಿಗೆ ನಾವು ಇರ್ತಿವಿ ಎಂದಿದ್ದಾರೆ ಶಿವಲಿಂಗೇಗೌಡ್ರು.

ನಾನೇನು ಯಾರಿಗೂ ಮೋಸ ಮಾಡಿಲ್ಲ, ಪಕ್ಷ ದ್ರೋಹ ಮಾಡಿಲ್ಲ, ಯಾರಿಗೂ ಕೆಟ್ಟ ಹೆಸರು ತಂದಿಲ್ಲ ಹೊಂದಾಣಿಕೆ ಆಗಲಿಲ್ಲ ಹೋಗಿದ್ದೀನಿ ಈ ದೇಶದ ಪ್ರಜಾಪ್ರಭುತ್ವದಲ್ಲಿ ಎಂತೆಂತಹವರು ಪಾರ್ಟಿ ಬಿಟ್ಟು ಹೋಗಿದ್ದಾರೆ.  ಎಷ್ಟು ಜನ ಪಾರ್ಟಿ ಬಿಟ್ಟು ಹೋಗಿದ್ದಾರೆ. ಎ.ಟಿ.ರಾಮಸ್ವಾಮಿ, ಶ್ರೀನಿವಾಸ್‌ಗೌಡ, ಗುಬ್ಬಿ ವಾಸಣ್ಣ ಯಾರ್ ಯಾರೋ ಯಾವ್ಯಾವ ಪಾರ್ಟಿ ಬಿಟ್ಟು ಹೋಗ್ತಾವ್ರೆ. ಅವತ್ತು ಹದಿನೇಳು ಜನರ ಜೊತೆ ಹೋಗುವದಾದರೆ ಅವತ್ತೆ ನನಗೆ ಮಂತ್ರಿ ಕೊಡೋರು ನಾನು ಅಂತಹ ಕೆಟ್ಟ ಕೆಲಸ ಮಾಡಲ್ಲ,‌ ನಾನು ಅದಲ್ಲ ನೀವು ಬಿ ಫಾರಂ ಕೊಟ್ಟಿದ್ದು ಐದು ವರ್ಷ.  ಏ.23 ರವರೆಗೆ ನಿಮ್ಮ  ಋಣ ಇದೆ ಅಲ್ಲಿಯವರೆಗೂ ನಾನು ರಾಜೀನಾಮೆ ಕೊಡಲ್ಲ. ಆಮೇಲೆ ನಾನು ಕೊಟ್ಟು ಹೋಗ್ತಿನಿ.

ನಾನು ರಾಜಕೀಯದ ಸನ್ಯಾಸಿ ಅಲ್ಲಾ, ನಾನು ರಾಜಕೀಯ ಮಾಡಲೇಬೇಕು,‌ ನಾನು ಮಾಡ್ತಿನಿ. ಅದುಕ್ಕೋಸ್ಕರ ಈ ಭಿನ್ನಾಭಿಪ್ರಾಯ ಬೇಡ. ಯಾರು, ಏನು, ಎಂತದ್ದು ಬೇಡ, ಜನ ಓಲೈಸಿಕೊಳ್ಳಿ. ರಣರಂಗದಲ್ಲಿ ಸೋಲಿಸಿ ನಾನೇನು ಬೇಡ ಅನ್ನಲ್ಲ. ಈ ಕ್ಷೇತ್ರದ ಜನ ನನ್ನ ಕೈ ಹಿಡುದ್ರೆ ನಾನು ಮುಂದುವರಿತಿನಿ. ಈ ಕ್ಷೇತ್ರದ ಜನ ಮುಂದುವರಿಯಲು ಕೊಡದೆ ಹೋದರೆ ಮನೆಗೆ ಹೋಗ್ತಿನಿ. ಅದರಲ್ಲಿ ಏನಿದೆ ತಪ್ಪು, ಅದಬಿಟ್ಟು ಇವನು ಮೋಸ ಮಾಡ್ದಾ ಅಂತಾರೆ. ನಾನು ಯಾರಿಗೆ ಮೋಸ ಮಾಡಿದ್ದೀನಿ ? ಈಗ ನಿಮ್ಮ ಪಾರ್ಟಿ ಅಧ್ಯಕ್ಷರನ್ನು ಮಾಡ್ಕಂಡಿದಿರಲ್ಲಾ ಇಬ್ರಾಹಿಂ ಸಿದ್ದರಾಮಯ್ಯ, ಅಹಿಂದ ಕಟ್ಕಂಡು ಹೋಗಿ ಎಂಎಲ್‌ಸಿ ಆಗ್ಲಿಲ್ವಾ ಕಾಂಗ್ರೆಸ್‌ನಲ್ಲಿ ಎಂದು ದಳಪತಿಗಳ ವಿರುದ್ಧವೇ  ಶಿವಲಿಂಗೇ ಗೌಡ್ರು  ಜೆಡಿಎಸ್ ದಳಪತಿಗಳ ವಿರುದ್ಧ ಸೈಲೇಂಟ್ ಆಗಿ ಗುಡುಗಿದ್ದಾರೆ.

K M Sivalinge Gowda: Araseikere MLA who responded to Dalpati’s criticism – will not resign till April 23…

Related posts

IPL 2023 CSKvsDC: ಈಡೇರುವುದೇ ಚೆನ್ನೈ ಪ್ಲೇ ಆಫ್ ಕನಸು?

CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ

May 23, 2023
Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

May 10, 2023
Tags: K M Sivalinge Gowda
ShareTweetSendShare
Join us on:

Related Posts

IPL 2023 CSKvsDC: ಈಡೇರುವುದೇ ಚೆನ್ನೈ ಪ್ಲೇ ಆಫ್ ಕನಸು?

CSKvsGT ಇಂದು ಚೆನ್ನೈ, ಗುಜರಾತ್ ಕ್ವಾಲಿಫೈಯರ್ 1 ಕದನ

by Honnappa Lakkammanavar
May 23, 2023
0

16ನೇ ಆವೃತ್ತಿಯ ಐಪಿಎಲ್ ರೋಚಕ ಘಟ್ಟ ತಲುಪಿದ್ದು ಇಂದು ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈಯರ್ ಒಂದರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ....

Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

Karnataka Assembly Election: ಮತದಾನದ ನಿಯಮ ಉಲ್ಲಂಘನೆ; ಮತ ಹಾಕಿದ್ದ ಫೋಟೋ, ವಿಡಿಯೋ ವೈರಲ್

by Honnappa Lakkammanavar
May 10, 2023
0

ಬೆಂಗಳೂರು : ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದಿದ್ದು, ಆದರೆ, ಗುಪ್ತವಾಗಿ ಹಕ್ಕು ಚಲಾಯಿಸಬೇಕಾದ ಮತದಾರರು ಅದನ್ನು ಬಹಿರಂಗ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಮತದಾನವನ್ನು ಗುಪ್ತವಾಗಿ ಮಾಡಬೇಕು...

Navjot Singh Sidhu

Navjot Singh Sidhu- ಜೈಲಿನಿಂದ ಬಿಡುಗಡೆಯಾದ ಸಿದ್ದು

by Ranjeeta MY
April 1, 2023
0

Navjot Singh Sidhu -ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‍ಸಿಂಗ್ ಸಿಧು ಅವರು ಹತ್ತು ತಿಂಗಳ ಜೈಲು ಶಿಕ್ಷೆ ಅನುಭವಿಸಿರುವ ಇಂದು ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. 34...

M S Dhoni

IPL 2023 :  ನಾಯಕನ  ಎಂಟ್ರಿ ವೇಳೆ  ಚೆಪಾಕ್ ನಲ್ಲಿ  ಪ್ರತಿಧ್ವನಿಸಿದ ಧೋನಿ ಧೋನಿ….  

by Naveen Kumar B C
March 28, 2023
0

IPL 2023 :  ನಾಯಕನ  ಎಂಟ್ರಿ ವೇಳೆ  ಚೆಪಾಕ್ ನಲ್ಲಿ  ಪ್ರತಿಧ್ವನಿಸಿದ ಧೋನಿ ಧೋನಿ….  IPL  ಸೀಸನ್ 16 ರ ಆರಂಭಕ್ಕೆ ಕೆಲವೇ ದಿನಗಳು  ಬಾಕಿ ಇವೆ. ...

angelo mathews

Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್

by Namratha Rao
March 12, 2023
0

Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್ ಶ್ರೀಲಂಕಾ ತಂಡದ ಹಿರಿಯ ಆಟಗಾರ ಏಂಜೆಲೋ ಮ್ಯಾಥ್ಯೂವ್ಸ್‌(115) ನ್ಯೂಜಿ಼ಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

June 8, 2023
ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram