K. N. Rajanna | ಅದು ಸಿದ್ದರಾಮೋತ್ಸವ ಅಲ್ಲ, ಹುಟ್ಟು ಹಬ್ಬದ ಆಚರಣೆ ಅಷ್ಟೇ
ತುಮಕೂರು : ಅದು ಸಿದ್ದರಾಮೋತ್ಸವ ಅಲ್ಲ, ಅವರ ಹುಟ್ಟು ಹಬ್ಬದ ಆಚರಣೆ ಅಷ್ಟೇ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಸಿದ್ದರಾಮಯ್ಯ75ನೇ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಆಗಸ್ಟ್ 3 ಕ್ಕೆ ಸಿದ್ದತೆ ಬಗ್ಗೆ ಇಂದು ಸಭೆ ಕರೆಯಲಾಗಿದೆ. ಆರ್ ವಿ ದೇಶಪಾಂಡೆ ಗೌರವ ಅಧ್ಯಕ್ಷರಾಗಿದ್ದಾರೆ.
ನಾನು ಸ್ವಾಗತ ಸಮಿತಿ ಅಧ್ಯಕ್ಷನಾಗಿದ್ದೇನೆ. ಚಂದ್ರಪ್ಪ ಹಾಗೂ ಚಳ್ಳಕೆರೆ ಶಾಸಕ ರಘುಮೂರ್ತಿ ವೀಕ್ಷಕರಾಗಿದ್ದಾರೆ.
ಸಿದ್ದರಾಮಯ್ಯನವರು ತಳಸಮುದಾಯದಿಂದ ಹಿಡಿದು ಎಲ್ಲಾ ಸಮುದಾಯದ ನಾಯಕರಾಗಿದ್ದಾರೆ.
ಅವರ ಕೊಟ್ಟ ಕಾರ್ಯಕ್ರಮ ಎಲ್ಲಾ ಸಮುದಾಯಕ್ಕೂ ಕೊಡುಗೆ ಇದೆ.
ಇದನ್ನ ಹೊರತುಪಡಿಸಿ ಕಾಂಗ್ರೆಸ್ ಮುಖಂಡ ಅಂತಾಲೋ ಅಥವಾ ಸಮುದಾಯದ ಮುಖಂಡ ಅಂತಾ ನೋಡಲು ಸಾಧ್ಯವಾಗಲ್ಲ ಅನ್ನೋ ಅಭಿಪ್ರಾಯ ನನ್ನದು ಎಂದು ಹೇಳಿದರು.
ಇನ್ನು ಅವರ 75 ವರ್ಷಗಳ ಸುದೀರ್ಘ ರಾಜಕೀಯ ಜೀವನ ನಿಜಕ್ಕೂ ಸಾಧನೆ. ಅದು ಸಿದ್ದರಾಮೋತ್ಸವ ಅಲ್ಲ, ಅವರ ಹುಟ್ಟು ಹಬ್ಬದ ಆಚರಣೆ ಅಷ್ಟೇ.
ಅವರ ರಾಜಕೀಯ ಹೋರಾಟ, ಸಾಧನೆ ಕುರಿತು ಹೊಸ ಪೀಳಿಗೆಗೆ ಪರಿಚಯ ಮಾಡಲು ಇದನ್ನ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಇಂದು ಆಳುತ್ತಿರುವ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡದವರು ಅಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿದ್ದು, ಈ ಬಗ್ಗೆ ಜನರಿಗೆ ಪುನಃ ಮನನ ಮಾಡಲು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರ ಮೂಲಕ ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 75 ಕಿಲೋಮೀಟರ್ ಪಾದಯಾತ್ರೆ ಬಗ್ಗೆ ನಿರ್ಣಯ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಕೊಡುಗೆ ಬಗ್ಗೆ ತಿಳಿಸಲು ನಿರ್ಣಯ ಮಾಡಲಾಗಿದೆ. ಈ ಕಾರ್ಯಕ್ರಮ ಆಗಸ್ಟ್ 1-10 ರವರೆಗೂ ನಡೆಯಲಿದೆ ಎಂದು ತಿಳಿಸಿದರು.