ನಾಳೆ ನಡೆಯಬೇಕಾಗಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

1 min read
K-set exam

ನಾಳೆ ನಡೆಯಬೇಕಾಗಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

ಮೈಸೂರು : ನಾಳೆ ನಡೆಯಬೇಕಿದ್ದ ಕೆ ಸೆಟ್ ಪರೀಕ್ಷೆ ಮುಂದೂಡಿಕೆಯಾಗಿದೆ.

ಈ ಕುರಿತು ಮೈಸೂರು ವಿವಿ ಕೆ ಸೆಟ್ ಸಂಯೋಜಕ ಪ್ರೊ.ಹೆಚ್.ರಾಜಶೇಖರ್ ಪ್ರಕಟನೆ ಹೊರಡಿಸಿದ್ದು, ಯುಜಿಸಿ ಮಾರ್ಗಸೂಚಿಯಂತೆ ಏಪ್ರಿಲ್ 11 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಆದರೆ, ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಲಾಗಿದೆ. ಮುಂದಿನ ಕೆಸೆಟ್ ಪರೀಕ್ಷಾ ದಿನಾಂಕವನ್ನ ಶೀಘ್ರದಲ್ಲಿ ಕೆಸೆಟ್ ವೆಬ್ ಸೈಟ್ ನಲ್ಲಿ ಪ್ರಚುರಪಡಿಸಲಾಗುವುದು.

K-set

ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆ-ಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ ಸೈಟ್ (http://kset.uni-mysore.ac.in)  ನಲ್ಲಿ ಆಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ವೀಕ್ಷಿಸುವಂತೆ ತಿಳಿಸಲಾಗಿದೆ.

belagavi
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd