kaalave mosagaara
ಟೀಸರ್ ಹಾಗೂ ಲಿರಿಕಲ್ ಹಾಡುಗಳಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಸ್ಯಾಂಡಲ್ ವುಡ್ ನ ಹೊಸ ಚಿತ್ರ ಕಾಲವೇ ಮೋಸಗಾರ.. ವಿಭಿನ್ನ ಟೈಟಲ್ , ಟೀಸರ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಕಾಲವೇ ಮೋಸಗಾರ ಚಿತ್ರಕ್ಕೆ ಸಾಮಾಜಿಕ ಜಾಲತಾಣದಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.. ಚಿತ್ರದ ಟೀಸರ್, ಫಸ್ಟ್ ಲುಕ್, ಸಾಂಗ್ಸ್ , ಆಕ್ಷನ್ ಸೀನ್ಸ್ ಸಿನಿಪ್ರಿಯರು ಫಿದಾ ಆಗಿದ್ದಾರೆ. ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ..
ಟೀಸರ್ ಈಗಾಗಲೇ ಹವಾ ಕ್ರಿಯೇಟ್ ಮಾಡಿದ್ದು, ಚಿತ್ರದ ರಿಲೀಸ್ ಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಬರೋಬ್ಬರಿ 4 ಕೋಟಿ ವೆಚ್ಚದಲ್ಲಿ ಮೂಡಿಬರುತ್ತಿರುವ ಈ ಸಿನೆಮಾ ಒಟ್ಟು 4 ಬಾಷೆಗಳಲ್ಲಿ ತೆರೆಗಪ್ಪಳಿಸಲಿದ್ದು, ಎಲ್ಲಾ ಭಾಷೆಗಳಲ್ಲಿ ಭಾರೀ ವೀಕ್ಷಣೆಗಳು, ಲೈಕ್ಸ್ , ಕಮೆಂಟ್ ಪಡೆದುಕೊಂಡಿದೆ.. ಕನ್ನಡ, ತೆಲುಗು , ತಮಿಳು, ಮಳಯಾಳಂನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಆಕ್ಷನ್, ಸಸ್ಪೆನ್ಸ್, ಥ್ರಿಲ್ಲಂಗ್ ಯಾವುದಕ್ಕೂ ಕಮ್ಮಿ ಇಲ್ಲ. ಈ ಚಿತ್ರ ಸಿನಿರಸಿಕರಿಗೆ ಭರ್ಜರಿ ರಸದೌತಣ ನೀಡೋದ್ರಲ್ಲಿ ಡೌಟೇ ಇಲ್ಲ.
ಅದ್ಧೂರಿಯಾಗಿ ಮೂಡಿಬರ್ತಿರುವ ಈ ಸಿನೆಮಾ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ರಿಲೀಸ್ ಗೂ ರೆಡಿಯಾಗಿದೆ. ಸದ್ಯ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದ್ದು, ಈಗಾಗಲೇ ಉತ್ತರ ಭಾರತದ ಭಾಗದಲ್ಲಿ ಡಬ್ಬಿಂಗ್ ರೈಟ್ಸ್ ಭಾರೀ ಡಿಮ್ಯಾಂಡ್ ಬಂದಿದೆ.. ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಗೂ ಸಿಕ್ಕಾಪಟ್ಟೆ ಬೆಡಿಕೆ ಬಂದಿದೆ.
ಚಿತ್ರದ ಹಾಡುಗಳು, ಲಿರಿಕಲ್ ವಿಡಿಯೋಗಳು, ಹಾಗೂ ಟೀಸರ್ ಪೋಸ್ಟರ್ ರಿಲೀಸ್ ಆಗಿ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಅಲ್ಲದೇ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಾಯಿದೆ.
ಈ ಚಿತ್ರದಲ್ಲಿ 5 ಆಕ್ಷನ್ ಸೀನ್ ಗಳಿದ್ದು, ಡಿಫರೆಂಟ್ ಡ್ಯಾನಿ ಹಾಗೂ ಥ್ರಿಲ್ಲರ್ ಮಂಜು ಸಾರಥ್ಯದ ಸಾಹಸ ದೃಶ್ಯಗಳು ಚಿತ್ರದಲ್ಲಿವೆ.. ಹೀಗಾಗಿ ಚಿತ್ರ ಅಭಿಮಾನಿಗಳಿಗೆ ಮಾಸ್ ಹಾಗೂ ಥ್ರಿಲ್ಲಿಂಗ್ ಅನುಭವ ನೀಡೋದ್ರಲ್ಲಿ ಎರೆಡು ಮಾತಿಲ್ಲ.
AR ರೆಹಮಾನ್ ಅವರ ಮ್ಯೂಸಿಕ್ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳು ರೆಕಾರ್ಡ್ ಆಗಿರೊದು ವಿಶೇಷ. ಈಗಾಗಲೇ 1 ಲಿರಿಕಲ್ ಹಾಡು, 2 ಆಕ್ಷನ್ ಟೀಸರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕ್ರಿಯೆಟ್ ಮಾಡಿದೆ. ಚಿತ್ರದಲ್ಲಿನ ಆಕ್ಷನ್ ಸೀನ್ಸ್ ಅಭಿಮಾನಿಗಳ ಗಮನ ಸೆಳೆದಿದೆ.
ಬಾಹುಬಲಿ ಮಾದರಿಯಲ್ಲಿ “ಕಬ್ಜ”: ರಿಯಲ್ ಸ್ಟಾರ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್..!
ಚಿತ್ರದ ನಾಯಕನಾಗಿ ಭರತ್ ಸಾಗರ್ ಮಿಂಚಲಿದ್ದು, ಯಶಸ್ವಿನಿ ರವೀಂದ್ರ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಉಳಿದಂತೆ ಕುರಿಪ್ರತಾಪ್, ಶಂಕರ್ ಮೂರ್ತಿ ಎಸ್. ಆರ್, ಬ್ಯಾಂಕ್ ಜನಾರ್ಧನ್, ವಿಜಯ ಚಂಡೂರ್ , ದರ್ಶನ್ ವಾರ್ನೇಕರ್ ಸೇರಿದಂತೆ ಅನೇಕರ ತಾರಾಬಳವಿದೆ.
ವಿಶೇಷ ಎಂದ್ರೆ ಟಗರು ಸಿನೆಮಾದ ಟೈಟಲ್ ಸಾಂಗ್ ಗೆ ಧ್ವನಿಯಾಗಿದ್ದ ಆಂಟೋನಿ ದಾಸ್ ಅವರು ಈ ಚಿತ್ರಕ್ಕೂ ಕಂಠ ದಾನ ಮಾಡಿದ್ದಾರೆ. ಅಲ್ಲದೇ ಅವರು ಹಾಡಿರುವ ಲಿರಿಕಲ್ ಹಾಡು ಹುಡ್ಗಿ ಬೇಕಾ ಹುಡ್ಗಿ ಹಾಡು ಸಹ ಯೂಟ್ಯೂಬ್ ನಲ್ಲಿ ಅಬ್ಬರಿಸುತ್ತಿದೆ.
ಇನ್ನೂ ವಿ. ನಾಗೇಂದ್ರ ಪ್ರಸಾದ್, ಆರ್ ಜೀವನ್, ಪ್ರಮೋದ್ ಮಾರವಂತೆ , ಸಂಜಯ್ ವದತ್ ಅವರು ಸಾಹಿತ್ಯ ರಚಿಸಿದ್ದಾರೆ. ರಿತ್ವಿಕ್ ಅವರ ಸಂಕಲನ, ಡಾ. ಕೆ ಆರ್ ಲೋಕೇಶ್, ಸಂಜೀವ್ ಟಿ ಅವರ ಸಂಗೀತ ಚಿತ್ರಕ್ಕಿದೆ. ಭಾವಸ್ಪಂದನ ಬ್ಯಾನರ್ ನ ಅಡಿ ಮೂಡಿಬಂದಿರುವ ಸಿನೆಮಾಗೆ ರಜತ್ ದುಗೋಜಿ ಅವರು ಬಂಡವಾಳ ಹೂಡಿದ್ದಾರೆ.
ಸಂಜಯ್ ವಾದತ್ ಅವರು ಆಕ್ಷನ್ ಕಟ್ ಹೇಳಿದ್ದು, ಶೀಘ್ರದಲ್ಲೇ “ಕಾಲವೇ ಮೋಸಗಾರ: ಸಿನಿರಸಿಕರನ್ನು ರಂಜಿಸಲು ಬೆಳ್ಳಿ ತೆರೆಗಪ್ಪಳಿಸಲಿದೆ. ಸಿನಿಮಾ ರಿಲೀಸ್ ಗೆ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel