ಕಬ್ಜ ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ, ಪೋಸ್ಟರ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್ ರೀತಿಯಲ್ಲೇ ಕಬ್ಜ ನಿರ್ಮಾಣ ಆಗುತ್ತಿದ್ದು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದರ ಮಧ್ಯೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಕಬ್ಜ ಸಿನಿಮಾಕ್ಕೆ ಬಹು ದೊಡ್ಡ ಸ್ಥಾನವೊಂದು ಸಿಕ್ಕಿದೆ.
ಸದ್ಯ ಚಿತ್ರೀಕರಣದ ಹಂತದಲ್ಲಿರುವ ಕಬ್ಜಗೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಗೌರವ ಒಂದು ಸಿಕ್ಕಿದ್ದು, ಭಾರತೀಯ ಚಿತ್ರರಂಗದ ಟಾಪ್ ಟೆನ್ ಸಿನಿಮಾಗಳ ಲಿಸ್ಟ್ ನಲ್ಲಿ ಕಬ್ಜ ಸ್ಥಾನಪಡೆದಿದೆ.
ಐ ಲವ್ ಯು ಸಿನಿಮಾ ಬಳಿಕ ಉಪ್ಪಿ, ಚಂದ್ರು ಜೋಡಿ ಮತ್ತೆ ಒಂದಾಗಿದ್ದು, ಇನ್ನು ಚಿತ್ರ ಶೂಟಿಂಗ್ ಹಂತದಲ್ಲಿದೆ. ಈ ಟೈಂನಲ್ಲಿ ಕಬ್ಜ ಇಂಡಿಯನ್ ಸಿನಿಮಾಗಳ ಟಾಪ್ ಟೆನ್ ಲಿಸ್ಟ್ ನಲ್ಲಿ ಆರನೇ ಸ್ಥಾನದಲ್ಲಿದೆ. ತೆಲುಗಿನ ಕಂಪನೆಯೊಂದು ನಡೆಸಿದ ಸರ್ವೇಯಲ್ಲಿ ಈ ವಿಷಯ ಬಹಿರಂಗ ಆಗಿದೆ.
ಕೆಜಿಎಫ್ ಗೆ ಮೊದಲ ಸ್ಥಾನ
ಇಂಡಿಯನ್ ಸಿನಿಮಾಗಳ ಟಾಪ್ ಟೆನ್ ಲಿಸ್ಟ್ ನಲ್ಲಿ ಕಬ್ಜ ಆರನೇ ಸ್ಥಾನದಲ್ಲಿದ್ದರೇ ಮೊದಲ ಸ್ಥಾನದಲ್ಲಿ ಕೆಜಿಎಫ್-2 ಇದೆ.






