ಕಾಬುಲ್ ವಿಮಾನ ನಿಲ್ದಾಣಕ್ಕೆ ಹೋಗದಂತೆ ಎಚ್ಚರಿಸಿದ ಆಸ್ಟ್ರೇಲಿಯಾ..!
ಆಸ್ಟ್ರೇಲಿಯಾ : ತಾಲಿಬಾನ್ ಉಗ್ರರ ವಶವಾಗಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಆಸ್ಟ್ರೇಲಿಯಾದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗದಂತೆ ಆಸ್ಟ್ರೇಲಿಯಾ ಸರ್ಕಾರ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಭಯೋತ್ಪಾದಕರ ದಾಳಿ, ಬೆದರಿಕೆ ಹೆಚ್ಚಾಗಿದೆ. ಆದ್ದರಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಅಲ್ಲದೇ ಬ್ರಿಟನ್ ಹಾಗೂ ನ್ಯೂಜಿಲ್ಯಾಂಡ್ ನ ರಾಷ್ಟ್ರದ ಸಹಕಾರದೊಂದಿಗೆ ತಮ್ಮ ಪ್ರಜೆಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗುವುದು ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಮರಿಸೆ ಪೇನ್ ಹೇಳಿದ್ದಾರೆ. ಅಲ್ಲದೇ ಕಾಬೂಲ್ನಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಭದ್ರತಾ ಸಮಸ್ಯೆ ಕುರಿತು ತಿಳಿಸಿದೆ. ಆದ್ದರಿಂದ ಎಚ್ಚರಿಕೆ ಇರಲಿ ಎಂದು ತಿಳಿಸಿದೆ. ಅಲ್ಲದೇ ಅಫ್ಗಾನ್ ನಿಂದ ಕಳೆದ ವಾರದಿಂದ ಸುಮಾರು 4000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ಸಾಲ್ ಮಾರಿಸನ್ ಹೇಳಿದ್ದಾರೆ.








