ಲೈಂಗಿಕ ಕ್ರಿಯೆ ವೇಳೆ ಖಾಸಗಿ ಭಾಗಕ್ಕೆ ಗಮ್ ಹಚ್ಚಿಕೊಂಡು ಪ್ರಾಣ ಬಿಟ್ಟ ಯುವಕ..!
ಕೆಲವೊಮ್ಮೆ ಕೆಲವೊಂದು ಪ್ರಸಂಗಗಳಲ್ಲಿ ಅತಿ ವಿಚಿತ್ರ ಎನಿಸುವಂತಹ ಘಟನೆಗಳು ನಡೆದುಹೋಗುತ್ತೆ.. ಇದೀಗ ಗುಜರಾತ್ ನಲ್ಲೊಬ್ಬ ಯುವಕ ತನ್ನ ಮಾಜಿ ಪ್ರೇಯಸಿ ಜೊತೆಗೆ ಲೈಂಗಿಕ ಕ್ರಿಯೆ ವೇಳೆ ಮಕ್ಕಳಾಗುವ ಭೀತಿಯಿಂದ ಕಾಂಡೊಮ್ ಬದಲಿಗೆ ಖಾಸಗಿ ಭಾಗಕ್ಕೆ ಗಮ್ ಹಚ್ಚಿಕೊಂಡಿದ್ರ ಪರಿಣಾಮ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 25 ವರ್ಷದ ಸಲ್ಮಾನ್ ಮಿರ್ಜಾ ಮೃತದುರ್ದೈವಿಯಾಗಿದ್ದಾನೆ. ಈತ ಮೂಲತಃ ಗುಜರಾತ್ ನ ಅಹಮದಾಬಾದ್ ನ ಫತೇವಾದಿ ಪ್ರದೇಶದವನೆಂದು ತಿಳಿದು ಬಂದಿದೆ. ಸಲ್ಮಾನ್ ಲೈಂಗಿಕ ಕ್ರಿಯೆ ನಡೆಸಲು ಕಾಂಡೋಮ್ ಬದಲು ಎಪೋಕ್ಸಿ ಅಡೆಸಿವ್ ಎಂಬ ಗಮ್ ಬಳಸಿದ್ದ. ಇದ್ರಿಂದ ಆತನ ಜೀವವೇ ಹೋಗಿದೆ.
ತನ್ನ ಮಾಜಿ ಪ್ರಿಯತಮೆಯೊಂದಿಗೆ ಸಲ್ಮಾನ್ ಹೋಟೆಲ್‍ಗೆ ಹೋಗಿದ್ದಾನೆ. ಅಲ್ಲಿ ಇಬ್ಬರೂ ಸೆಕ್ಸ್ ನಡೆಸಲು ಇಚ್ಛಿಸಿದ್ದಾರೆ. ಆದರೆ ಮಾಜಿ ಪ್ರೇಯಸಿ ಗರ್ಭಾವತಿಯಾಗಬಾರದೆಂದು ಎಚ್ಚರವಹಿಸುವುದಕ್ಕೆ ಕಾಂಡೋಮ್ ಇಲ್ಲದ ಕಾರಣ ತನ್ನ ಮರ್ಮಾಂಗಕ್ಕೆ ಗಮ್ ರೂಪದ ವಸ್ತು ಹಚ್ಚಿದ್ದಾನೆ. ಪರಿಣಾಮ ಆತ ಮೃತಪಟ್ಟಿದ್ದಾನೆ. ಇತ್ತ ಜುಹಾಪುರದ ಹೋಟೆಲ್ ಬಳಿ ಪೊದೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಲ್ಮಾನ್ ಪತ್ತೆಯಾಗಿದ್ದಾನೆ. ಸ್ನೇಹಿತ ಫಿರೋಜ್ ಶೇಖ್ ಪೊದೆಯಲ್ಲಿ ಬಿದ್ದಿದ್ದ ಸಲ್ಮಾನ್ ನನ್ನು ಕಂಡು ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಕೂಡಲೇ ಸಲ್ಮಾನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಸಲ್ಮಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಡ್ರಗ್ಸ್ ಕೇಸ್ : ರವಿತೇಜಾ, ರಾಣಾ, ರಕುಲ್ ಸೇರಿ 10 ಜನರಿಗೆ ಮತ್ತೆ ಸಂಕಷ್ಟ – ಇಡಿ ಸಮನ್ಸ್
ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ಅಂಟನ್ನು ಒಳಗೊಂಡಿರುವ ಮಾದಕದ್ರವ್ಯವನ್ನು ಕಿಕ್ ಪಡೆಯಲು ಬಳಸುತ್ತಿದ್ದನು. ಅಲ್ಲದೇ ಗರ್ಭಧಾರಣೆ ತಪ್ಪಿಸಲು ಅವರು ಖಾಸಗಿ ಅಂಗಕ್ಕೆ ಅಂಟನ್ನು ಬಳಸಿದ್ದಾನೆ. ಹೀಗಾಗಿ ಆತನ ಅಂಗಗಳು ಹಾನಿಗೊಳಗಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.








