ಇತಿಹಾಸ ಕಂಡರಿಯದ ದುರಂತ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ ಅಫ್ಘಾನ್..!
ಕಾಬುಲ್ : ಇತಿಹಾಸ ಕಂಡು ಕೇಳಿರದ ಕೆಲವು ದುರಂತ ಕ್ಷಣಗಳಿಗೆ ಅಫ್ಘಾನಿಸ್ತಾನ ಸದ್ಯ ಸಾಕ್ಷಿಯಾಗುತ್ತಿದೆ. ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ಉಗ್ರರು ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿ ಅರಾಜಕತೆ ಸೃಷ್ಠಿಯಾಗಿದೆ. ಉಗ್ರರ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದು ಪ್ರಾಣ ಭಯದಿಂದ ಅಲ್ಲಿನ ಜನರು ಬೇರೆ ದೇಶಗಳತ್ತ ಧಾವಿಸಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಬಸ್ ಗಳ ಮೇಲೆ ಕುಳಿತು ಪ್ರಯಾಣ ಮಾಡುವಂತೆ ವಿಮಾನಗಳ ಎಂಜಿನ್ ಮೇಲೆ ಕುಳಿತು ಬೇರೊಂದು ದೇಶಕ್ಕೆ ತೆರಳುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ವಿಮಾನದ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದ ಇಬ್ಬರು ವಿಮಾನದ ವೇಗಕ್ಕೆ ತಡೆಯಲಾರದೇ ಮೇಲಿಂದ ಕೆಳಗಡೆ ಬಿದ್ದು ಸಾವನ್ನಪ್ಪಿದ್ದಾರೆ.
ವಿಮಾನ ಪೂರ್ತಿ ಭತಿಯಾದ ಹಿನ್ನೆಲೆಯಲ್ಲಿ ಕೆಲವರು ವಿಮಾನದ ಮೇಲೆ ಕುಳಿತು ಪ್ರಯಾಣಿಸಲು ಧೈರ್ಯ ಮಾಡಿದ್ದಾರೆ. ಆದ್ರೆ ವಿಮಾನ ಟೇಕ್ ಆಪ್ ಆದ ಕೆಲವೇ ಕ್ಷಣಗಳಲ್ಲಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ದೃಶ್ಯಾವಳಿಗಳು ಭಯವನ್ನುಂಟು ಮಾಡುತ್ತಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ.









