Kabzaa Title Track : ಕಬ್ಜ ಚಿತ್ರದ ಟೈಟಲ್ ಟ್ರಾಕ್ ಬಿಡುಗಡೆ….
ನಿರ್ದೇಶಕ R ಚಂದ್ರು ನಿರ್ದೇಶನದ ಕನಸಿನ ಚಿತ್ರ ಉಪೇಂದ್ರ ಅಭಿನಯದ ಕಬ್ಜ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಹೈದ್ರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿ ಬ್ರಸೂರ್ ಸಂಗೀತ ನಿರ್ದೇಶನ ಕಬ್ಜ ಟೈಟಲ್ ಟ್ರಾಕ್ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ.
ಯಾರೋ ಇವನು ಭಯಂಕರ ಎನ್ನುವ ಟೈಟಲ್ ಟ್ರಾಕ್ ಗೆ ರವಿ ಬಸ್ರೂರ್ ಸಂಗೀತದ ಜೊತೆಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸಂತೋಷ್ ವೆಂಕಿ ಮತ್ತು ಭವ್ಯಶ್ರೀ ಬಂಡಿಮಠ ಹಾಡಿಗೆ ಧ್ವನಿಯಾಗಿದ್ದಾರೆ.
ಕೆಜಿಎಫ್ ಸರಣಿಗಳಿಗೆ ಸಂಗೀತ ಕೊಟ್ಟಿದ್ದ ರವಿ ಬಸ್ರೂರ್ ಇದೀಗ ಕಬ್ಜ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಚ್ 17 ರಂದು ಚಿತ್ರ ಕಬ್ಜ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ.
ಕಬ್ಜ ಸಿನಿಮಾ ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯನ್ನ ಹೊಂದಿದ್ದ, ಕೆಜಿಎಫ್ ದಾಟಿಯನ್ನ ಹೋಲುತ್ತಿದೆ. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನಟ ಕಿಚ್ಚ ಸುದೀಪ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Kabzaa Title Track: Kabzaa title track released….