Kajal Aggarwal : ಬಣ್ಣದ ಬುದುಕಿಗೆ ಕಾಜಲ್ ಅಗರ್ ವಾಲ್ ಗುಡ್ ಬೈ..?
‘ಲಕ್ಷ್ಮೀ ಕಲ್ಯಾಣಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕಾಜಲ್ ಅಗರ್ವಾಲ್ ನಂತರ ಸ್ಟಾರ್ ಹೀರೋಯಿನ್ ಆಗಿ ಟಾಲಿವುಡ್ ನ ಎಲ್ಲಾ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಸ್ಟಾರ್ ಹೀರೋಯಿನ್ ಆಗಿರುವಾಗಲೇ 2020ರಲ್ಲಿ ಕಾಜಲ್ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು.
ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ.
ಇದೀಗ ಅವರು ಸಿನಿಮಾ ರಂಗದಿಂದ ದೂರವಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಮಗುಗಾಗಿ ಸಮಯವನ್ನು ಕಾಯ್ದಿರಿಸುವ ಸಲುವಾಗಿ ಕಾಜಲ್ ಬಣ್ಣದ ಬದುಕಿನಿಂದ ದೂರ ಇರಲು ನಿರ್ಧಾರ ಮಾಡಿದ್ದಾರಂತೆ.
ಇದೇ ಕಾರಣಕ್ಕೆ ಈಗಾಗಲೇ ಹಲವು ನಿರ್ದೇಶಕ ನಿರ್ಮಾಪಕರ ಜತೆ ಮಾಡಿಕೊಂಡಿದ್ದ ಒಪ್ಪಂದಗಳು ರದ್ದಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಸದ್ಯದಲ್ಲೇ ಈ ಸುದ್ದಿಗೆ ಸ್ಪಷ್ಟತೆ ಬರಲಿದೆ. ಈ ಮಧ್ಯೆ ಕಾಜಲ್ ತಂಗಿ ನಿಶಾ ಅಗರ್ವಾಲ್ ಕೂಡ ಮದುವೆಯ ನಂತರ ಸಿನಿಮಾದಿಂದ ದೂರ ಉಳಿದಿದ್ದಾರೆ. kajal-aggarwal-likely-quit-movies