kajol agarwal
ದಕ್ಷಿಣ ಭಾರತದಖ್ಯಾತ ಬಹುಭಾಷಾ ನಟಿ ಕಾಜಲ್ ಅರ್ ವಾಲ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆಗೆ ಕಾಜಲ್ ಹಸೆಮಣೆ ಏರಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಗೌತಮ್ ಖ್ಯಾತ ನಟಿ ಕಾಜಲ್ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ಇನ್ನೂ ನಟಿ ಕಾಜಲ್ ಮತ್ತು ಗೌತಮ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಜಲ್ ಹಾಗೂ ಗೌತಮ್ ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿಬುಬರುತ್ತಿದೆ. ಇನ್ನೂ ಕಾಜಲ್ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸುತ್ತಿದ್ದರೆ, ಪತಿ ಗೌತಮ್ ಶೆರ್ವಾನಿಯಲ್ಲಿ ಗಮನ ಸೆಳೆದಿದ್ದಾರೆ. ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳ ಮಿತಿಯಲ್ಲೇ ಮದುವೆ ಸಮಾರಂಭ ನೆವೇರಿದೆ. ಕಾಜಲ್ ಮದುವೆಗೆ ಕೆಲವೇ ಕೆಲವು ಮಂದಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಕುಟುಂಬದವರು, ಸ್ನೇಹಿತರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದಾರೆ.
ಅಂದ್ಹಾಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾಜಲ್ ಮದುವೆ ಸಮಾರಂಭದ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲಾತಣಗಳಲ್ಲಿ ರಾರಾಜಿಸುತ್ತಿವೆ. ಇದೀಗ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ ಕಾಜಲ್. ಇನ್ನೂ ಕಾಜಲ್ ಮದುವೆ ನಂತರ ಸಿನಿಮಾರಂಗದಿಂದ ದೂರ ಸರಿಯುತ್ತಾರಾ ಎಂಬ ಗೊಂದಲಗಳಿಗೂ ಈಗಾಗಲೇ ತೆರಬಿದ್ದಿದೆ. ಇದಕ್ಕೆ ಖುದ್ದು ಕಾಜಲ್ ಸ್ಪಷ್ಟನೆ ನೀಡಿದ್ದು, ಮದುವೆ ನಂತರವೂ ಅಭಿನಯ ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ಅಭಿನಯದ ಇಂಡಿಯನ್-2 ಸಿನಿಮಾದಲ್ಲಿ ಕಾಜಲ್ ಬ್ಯುಸಿಯಾಗಿದ್ದಾರೆ. ಅಲ್ಲದೇ ಈಗಾಗಲೇ ಕಾಜಲ್ ವೆಬ್ ಸೀರಿಸ್ ಗೂ ಎಂಟ್ರಿಕೊಟ್ಟಾಗಿದೆ.
ನವೆಂಬರ್ 7ಕ್ಕೆ ಕಮಲ್ ಹಾಸನ್ ಬರ್ತ್ ಡೇ : 232ನೇ ಚಿತ್ರದ ಫಸ್ಟ್ ಲುಕ್ ರಿಲೀಸ್!
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
5 ವರ್ಷಗಳ ಬಳಿಕ ಸೂಪರ್ ಹಿಟ್ ಸಿನಿಮಾ “ರಂಗಿತರಂಗ” ರೀ ರಿಲೀಸ್ ..!
kajol agarwal
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel