Kalaburagi | ಕಲಷಿತ ನೀರು ಸೇವಿಸಿ 52 ಮಂದಿ ಅಸ್ವಸ್ಥ
ಕಲಬುರಗಿ : ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ ಜನ ಸಾಯುತ್ತಿರುವುದು ಹಾಗೇ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇವೆ.
ಈ ನಡುವೆ ಕಲುಷಿತ ನೀರು ಸೇವಿಸಿ ಒಬ್ಬರು ಮೃತಪಟ್ಟು, 52 ಮಂದಿ ಅಸ್ವಸ್ಥಗೊಂಡಿರುವ ಘಟನೆ ಕಲಬುರಗಿಯ ಮಂದೇವಾಲ ಗ್ರಾಮದಲ್ಲಿ ನಡೆದಿದೆ. ತಾಯಪ್ಪ ಮೃತ ದುರ್ದೈವಿಯಾಗಿದ್ದಾರೆ.
ಕಲಬುರಗಿಯ ಮಂದೇವಾಲ ಗ್ರಾಮದಲ್ಲಿ ನೀರು ಸೇವಿಸಿ 52 ಮಂದಿ ಅಸ್ವಸ್ಥಗೊಂಡಿದ್ದು, ರಾತ್ರಿ ಇಡೀ ವಾಂತಿ ಭೇದಿ ಬಳಲಿದ್ದಾರೆ. ಕೂಡಲೇ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ.