Kalaburagi | ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಕಲ ಸಿದ್ಧತೆ
ಕಲಬುರಗಿ : ಹೈದರಾಬಾದ್ ನಿಜಾಮರ ಸಂಸ್ಥಾನದಿಂದ ವಿಮೋಚನೆಯಾದ ದಿನ, ಸೆಪ್ಟೆಂಬರ್ 17.
ಹೀಗಾಗಿ ಈ ಶುಭದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನ ಅಂತ ಆಚರಣೆ ಮಾಡಲಾಗುತ್ತಿದೆ.
ಅದರಂತೆ ನಾಳೆ ಕಲಬುರಗಿಯಲ್ಲಿ ಅಮೃತ ಮಹೋತ್ಸವ ನಡೆಯಲಿದೆ.
ಈ ಸಡಗರ ಸಂಭ್ರಮದ ಉತ್ಸವಕ್ಕಾಗಿ ಬಿಸಿಲೂರು ಕಲಬುರಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಸಿಎಂ ಬೊಮ್ಮಾಯಿ ನಾಳೆ ಬೆಳಿಗ್ಗೆ 9 ಕ್ಕೆ ಸರ್ದಾರ್ ವಲ್ಲಬಭಾಯ್ ಪಟೇಲರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತ್ರ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ.
ಇದೇ ವೇಳೆ 11 ಗಂಟೆಗೆ ಎನ್ ವಿ ಮೈದಾನದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಿದ್ದಾರೆ.