ಕಲಬುರಗಿಯಲ್ಲಿ ಮಿತಿ ಮೀರುತ್ತಿರುವ ಕೊರೊನಾ – ಬೆಡ್ ಗಳ ಕೊರತೆ..!
ಕಲಬುರಗಿ : ಕಲಬುರಗಿಯಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗ್ತಾಯಿದೆ. ರೋಗಿಗಳ ಸಂಖ್ಯೆ ಹೆಚ್ಚಾಗ್ತಿದ್ದು, ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಎದುರಾಗಿದೆ. ಕಲಬುರಗಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಕೊವಿಡ್ ರೋಗಿಗಳ ಬೆಡ್ ವ್ಯವಸ್ಥೆ ಇಲ್ಲದೇ ಇರುವುದು ಗಮನಕ್ಕೆ ಬಂದಿದೆ.
ಜಿಮ್ಸ್ನಲ್ಲಿ 133 ನಾರ್ಮಲ್ ಬೆಡ್, 58 ICU ಬೆಡ್, ESI ಮೆಡಿಕಲ್ ಹಬ್ನಲ್ಲಿ 150 ನಾರ್ಮಲ್ ಬೆಡ್, 30 ICU ಬೆಡ್ ಗಳಿವೆ. ಜಿಲ್ಲೆಯಲ್ಲಿ 15 ಖಾಸಗಿ ಆಸ್ಪತ್ರೆಗಳನ್ನ ಕೋವಿಡ್-19 ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಲಾಗಿದೆ. ಎಲ್ಲಾ ಸೇರಿಸಿದ್ರೆ ಜಿಲ್ಲೆಯಲ್ಲಿರೋದು ಕೇವಲ 529 ಬೆಡ್ ಗಳು ಮಾತ್ರ ಇವೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಖಾಲಿ ಇರೋ ಬೆಡ್ಗಳ ಸಂಖ್ಯೆ 189 ಮಾತ್ರ ಇದ್ದು, ಖಾಸಗಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಖಾಲಿ ಇರೋದು ಕೇವಲ 5 ಮಾತ್ರ ಎನ್ನಲಾಗಿದೆ.
ಜಿಲ್ಲೆಯಲ್ಲಿ ಸರಾಸರಿ ಕೊರೊನಾ ಪಾಸಿಟಿವ್ ಸಂಖ್ಯೆ 300 ಗಡಿ ದಾಟುತಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣ ಸಂಖ್ಯೆ 27205, ಸಕ್ರಿಯ ಪ್ರಕರಣಗಳ ಸಂಖ್ಯೆ 2232 ಇದೆ. ಮುಂದಿನ ದಿನಗಳಲ್ಲಿ ಜಿಮ್ಸ್ ಆಸ್ಪತ್ರೆಯ ಹೆಚ್ಚು ಬೆಡ್ ಕೊರೋನಾ ರೋಗಿಗಳಿಗೆ ಕಾಯ್ದಿರಿಸಲು ಚಿಂತನೆ ನಡೆಸಲಾಗ್ತಿದೆ ಎಂದು ಕಲಬುರ್ಗಿ ಜಿಲ್ಲಾ ಆರೋಗ್ಯ ಅಧಿಕಾರಿ ಶರಣಬಸ್ಸಪ್ಪ ಗಣಜಲ್ ಖೇಡ್ ಹೇಳಿಕೆ ನೀಡಿದ್ದಾರೆ.








