ತುಮಕೂರು : ಮಟ್ಕಾ ಕಿಂಗ್ ಫಿನ್ ಮಟ್ಕಾ ಅಶ್ವಥ್ ಬಂಧನ..!

1 min read

ಮಟ್ಕಾ ಕಿಂಗ್ ಫಿನ್ ಮಟ್ಕಾ ಅಶ್ವಥ್ ಬಂಧನ..!

ತುಮಕೂರು : ಬಹುರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮಟ್ಕಾ ದೊರೆ ಅಶ್ವತ್ಥ್ ನನ್ನ ತುಮಕೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಶೇಷ ತಂಡ ರಚಸಿ ಕಾರ್ಯಾಚಾರಣೆ ನಡೆಸಿದ ತುಮಕೂರು ಪೊಲೀಸರು ಕಡೆಗೂ ಮಟ್ಕಾ ಅಶ್ವಥ್ ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಟ್ಕಾ ಕಿಂಗ್ ಫಿನ್ ಆಗಿರುವ ಈತ 3 ರಾಜ್ಯಗಳಿಗೆ ಬೇಕಾದ ಆರೋಪಿಯಾಗಿದ್ದಾನೆ. ಮಟ್ಕಾ ದೊರೆ ಅಂತಲೇ ಫೇಮಸ್ ಆಗಿದ್ದ ಅಶ್ವಥ್ ನನ್ನ ಸದ್ಯ ತುಮಕೂರು ಪೊಲೀಸರು ಬಂಧಿಸಿದ್ದಾರೆ.

ಪಾವಗಡದಲ್ಲಿ ಜೂಜು, ಆನ್ ಲೈನ್ ಮಟ್ಕಾ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅಶ್ವಥ್.. ಆಂಧ್ರ, ಕರ್ನಾಟಕ ತಮಿಳುನಾಡಿನಲ್ಲೂ ಕುಖ್ಯಾತಿ ಪಡೆದಿದ್ದ. ಕಳೆದ 25 ವರ್ಷಗಳಿಂದ ಮಟ್ಕಾ ಆಡ್ತಿದ್ದವನ ಮೇಲಿದ್ದ ಯಾವ ಕೇಸ್ ಕೂಡ ಸಾಕ್ಷಿ ಕೊರತೆಯಾಗಿ ನಿಲ್ತಿರಲಿಲ್ಲ. ಅನೇಕ ಬಾರಿ ಗಡಿಪಾರಾಗಿ ಬಳ್ಳಾರಿ ಜೈಲಿನಲ್ಲೂ ಕೂಡ 6 ತಿಂಗಳು ಬಂಧಿಯಾಗಿದ್ದ ಅಶ್ವಥ್, ವಾಟ್ಸಪ್ ಗ್ರೂಪ್ ಮಾಡಿ ಮಟ್ಕ ಬುಕ್ಕಿಗಳನ್ನ ಇಟ್ಟುಕೊಂಡು ಕೆಲಸ ಮಾಡ್ತಿದ್ದ..
ಮುಂಬೈನಿಂದ ಮಟ್ಕಾ ರಿಸಲ್ಟ್ ಪಡೆದು ಪೇಮೆಂಟ್ ಪಡೀತಿದ್ದ. ಯುಗಾದಿ ಹಬ್ಬಕ್ಕಾಗಿ ಪಾವಗಡಕ್ಕೆ ಬಂದಾಗ ಏಕಾಏಕಿ ದಾಳಿ ನಡೆಸಿದ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.

ಏಪ್ರಿಲ್ 13 ರಂದು ಮಫ್ತಿಯಲ್ಲಿ ಇಡೀ ದಿನ ಕಾದು ಕುಳಿತಿದ್ದ ಪೊಲೀಸರಿಗೆ ಅಶ್ವಥ್ ಮನೆ ಬಳಿಯೇ ಸಿಕ್ಕಿ ಬಿದ್ದಿದ್ದಾನೆ. ಅಶ್ವಥ್ ವಿರುದ್ಧ ಗೂಂಡಾ ಖಾಯ್ದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.. ಸದ್ಯ ಅಶ್ವಥ್ ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದಾನೆ.. ಎಎಸ್ಪಿ ಉದೇಶ್ ನೇತೃತ್ವದಲ್ಲಿ ವಿಶೇಷ ತಂಡವನ್ನ ತುಮಕೂರು ಎಸ್ಪಿ ಡಾ.ವಂಸಿಕೃಷ್ಣ ರಚಿಸಿದ್ದರು.. ಅಂಧ್ರ ತಮಿಳುನಾಡು ಪೊಲೀಸರಿಂದಲೂ ಇಂದು ಅಶ್ವಥ್ ವಿಚಾರಣೆ ನಡೆಯಲಿದೆ.

ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ – ಹೊತ್ತು ಉರಿದ ವಾಹನಗಳು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd