Kalburgi : ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ – ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಕಲಬುರ್ಗಿ : ಕಲಬುರ್ಗಿ ರೈಲ್ವೆ ನಿಲ್ದಾಣಕ್ಕೆ ಹಸಿರು ಬಣ್ಣ ಹಿನ್ನೆಲೆ ಹಿಂದೂ ಸಂಘಟನೆಗಳು ವಿರೋಧಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ..
ಇಂದು ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿರುವ ಹಿಂದು ಜಾಗೃತಿ ಸೇನೆಯು ಹಸಿರು ಬಣ್ಣ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ,..
ರೈಲ್ವೆ ನಿಲ್ದಾಣದ ಬಳಿ ಪೊಲೀಸ್ ಭದ್ರತೆ ಆಯೋಜಿಸಲಾಗಿತ್ತು.. ರೈಲ್ವೆ ನಿಲ್ದಾಣದ ಮುಂಭಾಗ ಬ್ಯಾರಿಕೇಡ್ ಹಾಕಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು..
ರೈಲ್ವೇ ನಿಲ್ದಾಣ ಮಸೀದಿಯಂತೆ ಗೋಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಇನ್ನೂ ಪ್ರತಿಭಟನೆಗೆ ಮಣಿದ ಇಲಾಖೆ ಹಸಿರು ಬಣ್ಣ ತೆಗೆದು ಬಿಳಿ ಬಣ್ಣ ಬಳಿಸಲು ನಿರ್ಧಾರ ಮಾಡಿರೋದಾಗಿ ಗೊತ್ತಾಗಿದೆ..
Kalburgi railway station , hindu activists protest








