Kalistan Australia : ತ್ರಿವರ್ಣ ಧ್ವಜ ಹಿಡಿದವರ ಮೇಲೆ ಖಲಿಸ್ತಾನಿಗಳ ದಾಳಿ
ಆಸ್ಟ್ರೇಲಿಯಾದಲ್ಲಿ ಮತ್ತೆ ಖಲಿಸ್ತಾನಿಯರು ಭಾರತೀಯರ ಮೇಲೆ ಅಟ್ಟಹಾಸ ಮೆರೆದಿದ್ದಾರೆ… ತ್ರಿವರ್ಣ ಧ್ವಜ ಹಿಡಿದಿದ್ದವರ ಮೇಲೆ ಖಲಿಸ್ತಾನಿ ಉಗ್ರರ ಬೆಂಗಲಿಗರು ದಾಳಿ ನಡೆಸಿದ್ದಾರೆ..
ಈ ವೀಡಿಯೋವನ್ನು ಬಿಜೆಪಿ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮಾಜ ವಿರೋಧಿ ಚಟುವಟಿಕೆಯನ್ನು ಎದುರಿಸಬೇಕು ಎಂದು ಕರೆ ಕೊಟ್ಟಿದ್ದಾರೆ..
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ನಡೆಸುತ್ತಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ಖಂಡಿಸುತ್ತೇನೆ. ಈ ಚಟುವಟಿಕೆಗಳಿಂದ ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುತ್ತಿರುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಖಲಿಸ್ತಾನಿ ಧ್ವಜ ಹಿಡಿದ ಗುಂಪೊಂದು ತ್ರಿವರ್ಣ ಧ್ವಜವನ್ನು ಹಿಡಿದಿದ್ದ ಭಾರತೀಯರ ಮೇಲೆ ದಾಳಿ ನಡೆಸಿದ್ದಾರೆ.. ಖಲಿಸ್ತಾನಿ ಪರ ತಂಡ ರಾಡ್ ಗಳನ್ನು ಹಿಡಿದು ಮತ್ತೊಂದು ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ.. ಅಲ್ಲದೇ ಈ ವೇಳೆ ತ್ರಿವರ್ಣ ಧ್ವಜವನ್ನು ರಸ್ತೆಗೆ ಎಸೆದಿದ್ದಾರೆ.
ಘಟನೆ ವೇಳೆ ಐವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಐವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯನ್ನು ಖಂಡಿಸಿರುವ ವಿಕ್ಟೋರಿಯಾ ಪೊಲೀಸರು, ಹಿಂಸಾತ್ಮಕ ದಾಳಿಯ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ ಕೆಲವೇ ವಾರಗಳ ನಂತರ ಈ ಘಟನೆ ನಡೆದಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
Kalistan supporters attack on those who carried trivarna flag in Australia
https://twitter.com/i/status/1619654478722129921








