(kaliveera Film)
ವಿಭಿನ್ನ ಕಥಾಹೊಂದರ ಹೊಂದಿರುವ ಸ್ಯಾಂಡಲ್ ವುಡ್ ನ ಹೊಸ ಚಿತ್ರವಾದ ‘ಕಲಿವೀರ’ ಶೀಘ್ರದಲ್ಲೇ ತೆರೆಗಪ್ಪಳಿಸಲು ಸಜ್ಜಾಗಿದೆ. ಟೈಟಲ್ ನಿಂದಲೇ ಗಮನ ಸೆಳೆಯುತ್ತಿರುವ ಕಲಿವೀರ ಸಿನೆಮಾದ ಮೋಷನ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಸದ್ದು ಮಾಡ್ತಿದೆ.

ರಾಣೆಬೆನ್ನೂರಿನ ಏಕಲವ್ಯ ಈ ಚಿತ್ರಕ್ಕೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕನ್ನಡ ದೇಶದೊಳ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಅವರು ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಇನ್ನೂ ಮೋಷನ್ ಪೋಸ್ಟರ್ ಅಭಿಮಾನಿಗಳನ್ನ ಕೌತಕಕ್ಕೀಡುಮಾಡಿತ್ತು. ಯಾಕಂದ್ರೆ ಈ ಪೋಸ್ಟರ್ ನಲ್ಲಿ ಅಘೋರಿಯೊಬ್ಬ ಬರುಡೆ ಮೇಲೆ ಕಾಲಿಟ್ಟಿದ್ದು , ಇದು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನೂ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಪೋಸ್ಟರ್ ಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ. ಬುಡಕಟ್ಟು ಜನಾಂಗದ ಜೀವನದ ಕಥೆ ಹೊಂದಿರುವ ಕಲಿವೀರ ಸಾಹಸಮಯದ ಕರಾಮತ್ತಿನಿಂದ ಕೂಡಿರುವ ಸಿನೆಮಾಗಿದೆ. ಈ ಚಿತ್ರದಲ್ಲಿ ಆಕ್ಷನ್ ಸೀನ್ಸ್ ಗೆ ಯಾವುದೇ ಕುಂದುಕೊರೆತೆಯೇ ಇಲ್ಲ.. ಥ್ರಿಲ್ಲಿಂಗ್ ಅನುಭವದ ಜೊತೆಗೆ ರೋಮ್ಯಾನ್ಸ್, ಹಾರರ್, ಸಸ್ಪೆನ್ಸ್ ಮತ್ತು ರಿವೇಂಜ್ ಎಲ್ಲದರ ಮಿಶ್ರಣವಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಈ ಕಲಿವೀರ.. ಸಿನಿಪ್ರಿಯರಿಗೆ ‘ಕಲಿವೀರ’ ಭರ್ಜರಿ ಮನರಂಜನೆ ನೀಡೋದ್ರಲ್ಲಿ ಅನುಮಾನವಿಲ್ಲ.
(kaliveera Film)‘ಕಲಿವೀರನ ವಿಶೇಷತೆಗಳು’
ಇನ್ನೂ ಕಲಿವೀರ ಚಿತ್ರದಲ್ಲಿ ಹಲವಾರು ವಿಶೇಷತೆಗಳಿರುವುದು ಈ ಚಿತ್ರದ ಕ್ರೇಜ್ ಹೆಚ್ಚಿಸಿದೆ.. ಯಾಕಂದ್ರೆ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಮೊದಲ ಬಾರಿಗೆ ಕಲಿವೀರ ಸಿನಿಮಾದಲ್ಲಿ ರಿಯಲ್ ಸ್ಟಂಟ್ಸ್ ಪ್ರದರ್ಶಿಸಲಾಗಿದೆ. ಇದೇ ರೀತಿ ಹಲವಾರು ವಿಶೇಷಗಳನ್ನ ಒಳಗೊಂಡಿದೆ ಕಲಿವೀರ ಚಿತ್ರ.

ಇನ್ನೂ ಚಿತ್ರದ ನಾಯಕನಾಗಿರುವ ಏಕಲವ್ಯ ಹೆಸರಿನಂತೆಯೇ ಓರ್ವ ಸಾಹಸಿ. ಏಕಲವ್ಯ ಓರ್ವ ಟ್ರೈನಡ್ ಮಾರ್ಷಿಯಲ್ ಆರ್ಟ್ಸ್ ಮತ್ತೆ ನೃತ್ಯಗಾರರಾಗಿದ್ದಾರೆ. ಅಲ್ಲದೇ ಯೋಗ ಚಾಂಪಿಯನ್, ಕರಾಟೆ ಕಾಲರಿಪಾಯಟ್ಟುವಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತರಾಗಿದ್ದಾರೆ. ಅಲ್ಲದೇ ನಿನಾಸಂ ಮತ್ತು ರಂಗಾಯಣದಲ್ಲಿ ನಟನೆಯ ತರಬೇತಿ ಪಡೆದುಕೊಂಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಪಾವನ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ತುಳು ಚಿತ್ರದಲ್ಲಿ ಹೆಸರು ಮಾಡಿರುವ ಚಿರಶ್ರೀ ಅಂಚನ್ ಅವರು ಸಹ ಈ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ.

ವಿ ನಾಗೇಂದ್ರ ಪ್ರಸಾದ್, ವಿ ಮನೋಹರ್, ಅರಸು ಅಂತರೆಯವರ ಸಾಹಿತ್ಯ ಚಿತ್ರಕ್ಕಿದೆ. ಚೈತ್ರ ಹೆಚ್ ಜಿ, ಶಶಾಂಕ್ ಶೇಶಗಿರಿ, ಸಿದ್ಧಾರ್ಥ ಬೆಲಮಣ್ಣು, ಸುನಿತಾ ಮುರಿಳಿ ಅವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಚಿತ್ರದಲ್ಲಿ ನಾಗಾಭರಣ, ತಬಲ ನಾಣಿ, ಡ್ಯಾನಿ ಕುಟ್ಟಪ್ಪ, ಮುನಿರಾಜು, ನಿನಾಸಂ ಅಶ್ವಥ್, ಅನಿತಾ ಭಟ್, ಸುರೇಶ್ ಚಂದ್ರ, ಮೋಹನ್ ಜುನೇಜಾ, ರಮೇಶ್ ಪಂಡಿತ್, ಉಮೇಶ್ ಪುಂಗಾ, ಸೂರ್ಯ ನಾರಾಯಣ್, ರೇಣುಕಾ ಗೌಡ ಸೇರಿದಂತೆ ಅನೇಕರ ತಾರಾಬಳಗ ಚಿತ್ರದಲ್ಲಿದೆ.
ಜ್ಯೋತಿ ಬ್ಯಾನರ್ಸ್ ನ ಅಡಿ ಮೂಡಿಬರುತ್ತಿರುವ ಚಿತ್ರಕ್ಕೆ ಕೆ ಎಂಪಿ ಶ್ರೀನಿವಾಸ್, ರಾಜು ಪೂಜಾರ್, ಹನುಮಂತಪ್ಪ ಪಿ.ಕೆ ಅವರು ಬಂಡವಾಳ ಹೂಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸ ಹಾಗೂ ಮುರಳಿ ಮಾಸ್ಟರ್ ಕೊರಿಯಾಗ್ರಫಿ ಚಿತ್ರಕ್ಕಿದೆ.
ನಿರ್ಮಾಪಕರಿಗೆ 8 ಕೋಟಿ ನೀಡುವಂತೆ ನಟ ವಿಶಾಲ್ ಗೆ ಕೋರ್ಟ್ ಆದೇಶ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel