ಗುವಾಹಟಿ: ಎಲ್ಲವೂ ಸರಿ ಇದ್ದಿದ್ದರೆ
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಇಂದು ಒಡಿಸ್ಸಾದ ಕಾಮಾಕ್ಯ ಮಂದಿರ ಲಕ್ಷ ಲಕ್ಷ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಪ್ರತಿ ವರ್ಷ ನಡೆಯುವ ಅಂಬುಬಾಚಿ ಮೇಳದ ವೇಳೆ ಕಾಮಾಕ್ಯ ಮಂದಿರದಲ್ಲಿ ಕಾಲಿಡಲೂ ಜಾಗ ಇರುತ್ತಿರಲಿಲ್ಲ. ಆದರೆ, ಈ ವರ್ಷದ ಸ್ಥಿತಿಯೇ ಬದಲಾಗಿದೆ.
ದೇಶದ 51 ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಒಡಿಸ್ಸಾದ ಕಾಮಾಕ್ಯ ಮಂದಿರ ಭಕ್ತರಿಲ್ಲದೆ ಬಿಕೋ ಎನ್ನುತ್ತಿದ್ದು, ಮರುಭೂಮಿಯಂತಹ ವಾತಾವರಣ ಕಂಡು ಬರುತ್ತಿದೆ.
ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲೆಡೆ ಲಾಕ್‌ಡೌನ್ ಬಳಿಕ ಒಡಿಸ್ಸಾದ ಗುವಾಹಟಿಯಲ್ಲಿರುವ ಕಾಮಾಕ್ಯ ಮಂದಿರ ಬಂದ್ ಮಾಡಲಾಗಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶದ ಹಲವು ದೇವಾಲಯಗಳು ಭಕ್ತರಿಗೆ ತೆರೆದುಕೊಂಡಿವೆ. ಆದರೆ, ಒಡಿಸ್ಸಾದ ಕಾಮಾಕ್ಯ ಮಂದಿರ ಮಾತ್ರ ಓಪನ್ ಆಗಿಲ್ಲ.
ಕಾಮಾಕ್ಯ ಮಂದಿರವನ್ನು ಭಕ್ತರಿಗೆ ತೆರೆದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಜೂನ್30ರವರೆಗೆ ಮಂದಿರವನ್ನು ತೆರೆಯದೇ ಇರಲು ಆಡಳಿತ ಮಂಡಳಿ ನಿರ್ಧರಿಸಿದೆ. ಜುಲೈ.1ರ ನಂತರ ಕೊರೊನಾ ಸ್ಥಿತಿಗತಿ ನೋಡಿಕೊಂಡು ಸರ್ಕಾರದ ಮಾರ್ಗದರ್ಶನದಂತೆ ದೇವಾಲಾಯ ತೆರೆಯಲು ಕಾಮಾಕ್ಯ ಮಂದಿರದ ಆಡಳಿತ ಮಂಡಳಿ ನಿರ್ಧರಿಸಿದೆ.
ಅಂಬುಬಾಚಿ ಮೇಳಕ್ಕೆ 30 ಲಕ್ಷ ಭಕ್ತರು
ಪ್ರತಿ ವರ್ಷ ಕಾಮಾಕ್ಯ ಮಂದಿರದಲ್ಲಿ ನಡೆಯುವ ಅಂಬುಬಾಚಿ ಮೇಳದಲ್ಲಿ ಈಶಾನ್ಯ ರಾಜ್ಯಗಳ ಭಕ್ತರು ಹಾಗೂ ವಿದೇಶಿಯರು ಸೇರಿದಂತೆ 30 ಲಕ್ಷ ಭಕ್ತರು ಪಾಲ್ಗೊಳ್ಳುತ್ತಾರೆ. ಪ್ರತಿವರ್ಷ ಜೂನ್ ತಿಂಗಳಲ್ಲಿ ನಡೆಯುವ ಅಂಬುಬಾಚಿ ಮೇಳಕ್ಕೆ ಸಾಧು ಸಂತರ ದಂಡೇ ಸೇರುತ್ತಿತ್ತು. ಈ ವರ್ಷದ ಅಂಬುಬಾಚಿ ಮೇಳ ಜನರಿಲ್ಲದೆ ನಡೆಯುತ್ತಿದೆ.
ಇಂದು ಬೆಳಿಗ್ಗೆ 7.53ಕ್ಕೆ ಅಂಬುಬಾಚಿ ಮೇಳದ ಪೂಜಾ ಕೈಕಂರ್ಯಗಳು ಆರಂಭವಾಗಿದ್ದು, ಜೂನ್ 25ರ ರಾತ್ರಿ 8.16ಕ್ಕೆ ಕೊನೆಗೊಳ್ಳಲಿವೆ.
ಕೇವಲ ಬೆರಳೆಣಿಕೆಯ ಅರ್ಚಕರು ಅಂಬುಬಾಚಿ ಮೇಳದ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದಾರೆ. ಕಾಮಾಕ್ಯ ಮಂದಿರ ಗರ್ಭಗೃಹವನ್ನು ತೆರೆದಿಲ್ಲ. ಗರ್ಭಗೃಹದ ಹೊರಗೆ ಹಣ್ಣು ಹಂಪಲುಗಳನ್ನಿಟ್ಟು ಅಂಬುಬಾಚಿ ಮೇಳದ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಜೂ.26ರ ಬೆಳಿಗ್ಗೆ ಗರ್ಭಗೃಹವನ್ನು ಪೂಜೆಗೆ ತೆರೆಯಲಾಗುತ್ತಿದೆ.