Kamal Hassan : ‘ಚೋಳ ರಾಜರು ಹಿಂದೂಗಳಲ್ಲ’ ವಿವಾದಾತ್ಮಕ ಹೇಳಿಕೆ ಕೊಟ್ಟ ಕಮಲ್ ಹಾಸನ್
ಮಣಿರತ್ನಂ ಅವರ ಕನಸಿನ ಸಿನಿಮಾ ಮಲ್ಟಿ ಸ್ಟಾರ್ ಪ್ಯಾನ್ ಇಂಡಿಯನ್ ಬಿಜ್ ಬಜೆಟ್ ಸಿನಿಮಾ ಪೊನ್ನಿಯನ್ ಸೆಲ್ವಂ ಭರ್ಜರಿ ಯಶಸ್ಸು ಕಾಣುತ್ತಿದೆ.. ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡ್ತಿದೆ.. ಆದ್ರೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಈ ನಡುವೆ ಬಹುಭಾಷಾ ಸ್ಟಾರ್ ನಟ ಕಮಲ್ ಹಾಸನ್ ಅವರು ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ..
ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಉಳಗ ನಾಯಗನ್ . ಕಲೆಗೆ ಯಾವುದೇ ಭಾಷೆ, ಜಾತಿ, ಧರ್ಮವಿಲ್ಲ.. ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ತೆಲುಗಿನ ಜೊತೆಗೆ ಬೇರೆ ಭಾಷೆಯಲ್ಲೂ ಬೆಂಬಲವಿಲ್ಲ ಎಂಬುದು ಸರಿಯಲ್ಲ. ಯಾರೋ ಕೆಲವರು ಹೀಗೆ ಹೇಳುತ್ತಾರೆ ಅಷ್ಟೇ. ತಮಿಳರು ತೆಲುಗಿನ ಶಂಕರಾಭರಣಂ ಬೆಂಬಲಿಸಿದ್ದರು. ಅದೇ ರೀತಿ ತಮಿಳಿನ ಮರೋ ಚರಿತ್ರ ಚಿತ್ರವನ್ನು ಆಂಧ್ರದ ಜನ ಒಪ್ಪಿಕೊಂಡಿದ್ದರು. ಸಿನಿಮಾಗೆ ಭಾಷೆ ಎನ್ನುವುದು ಇಲ್ಲ. ಸಿನಿಮಾ ಚೆನ್ನಾಗಿದ್ದರೆ ಭಾಷೆ ಯಾವುದೇ ಆದರೂ ಜನ ನೋಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ ಚೋಳ ರಾಜರು ಹಿಂದೂಗಳಲ್ಲ.. ಚೋಳನ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ, ಶೈವ ಮತ್ತು ವೈಷ್ಣವ ಧರ್ಮ ಮಾತ್ರ ಇತ್ತು. ಬ್ರಿಟಿಷರು ನಮ್ಮ ದೇಶವನ್ನು ಪ್ರವೇಶಿಸಿದ ನಂತರ ನಮ್ಮನ್ನು ಏನೆಂದು ಕರೆಯಬೇಕೆಂದು ಅವರಿಗೆ ತಿಳಿದಿರಲಿಲ್ಲ , ನಂತರ ಅವರು ನಮ್ಮನ್ನು ಹಿಂದೂಗಳು ಎಂದು ಸಂಬೋಧಿಸಿದರು ಎಂದು ಕಮಲ್ ಹಾಸನ್ ಹೇಳಿದ್ದಾರೆ. ಕಮಲ್ ಹಾಸನ್ ರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗ್ತಿದೆ.
Kamal Haasan agrees with Vetrimaaran: ‘Hindu religion was not there in Rajaraja Cholan’s period’