Kamal Haasan | ಇಂಡಿಯನ್ 2 ಸಿನಿಮಾ ಬಗ್ಗೆ ಕಮಲ್ ಹೇಳಿದ್ದೇನು..?
ನಾಲ್ಕು ವರ್ಷಗಳ ನಂತರ ಲೋಕನಾಯಕ (ಉಳಗ ನಾಯಗನ್) ಕಮಲ್ ಹಾಸನ್ ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ.
ಅವರ ಇತ್ತೀಚಿನ ಚಿತ್ರ ‘ವಿಕ್ರಮ್: ಹಿಟ್ ಲಿಸ್ಟ್ ಸೇರಿದ್ದು, ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಕಮಲ್ ಸಂದರ್ಶನವೊಂದರಲ್ಲಿ ಇಂಡಿಯನ್ 2 ಸಿನಿಮಾ ಬಗ್ಗೆ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.
ಇಂಡಿಯನ್ 2 ಸಿನಿಮಾ ನಿಂತಿಲ್ಲ. ಖಂಡಿತಾ ಪ್ರೇಕ್ಷಕರ ಮುಂದೆ ತರುತ್ತೇನೆ. ಅನೇಕ ಕಾರಣಗಳಿಂದ ಸಿನಿಮಾ ಚಿತ್ರೀಕರಣಕ್ಕೆ ತೊಂದರೆಯಾಗುತ್ತಿದೆ. ಆದರೂ ಶೂಟಿಂಗ್ ಮುಂದುವರೆಸುತ್ತೇವೆ.
ಈಗಾಗಲೇ ಈ ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಜತೆ ಮಾತುಕತೆ ನಡೆಸಿದ್ದೇವೆ. ಇನ್ನು ಶೇಕಡ 40ರಷ್ಟು ಚಿತ್ರೀಕರಣ ಬಾಕಿ ಇದೆ.
ಅದನ್ನು ಕೂಡ ಶೀಘ್ರದಲ್ಲೇ ಮಾಡುತ್ತೇವೆ. ಏಕೆಂದರೆ ಹತ್ತು ವರ್ಷಗಳ ಕಾಲ ಒಂದೇ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.