ಗೃಹಿಣಿಯರ ಮನೆಗೆಲಸಕ್ಕೂ ವೇತನ : ಕಮಲ್ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ
ಚೆನ್ನೈ : 2021ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ರಣಾಂಗಣ ರಂಗೇರಿದೆ. ಇತ್ತ ಚುನಾವಣಾ ಪ್ರಚಾರ ಆರಂಭಿಸಿರುವ ಮಕ್ಕಳ್ ನೀಧಿ ಮೈಯ್ಸಮ್ ಮುಖಂಡ ನಟ ಕಮಲ್ ಹಾಸನ್ ಅವರ ಪ್ರಣಾಳಿಕೆ ಈಗ ಎಲ್ಲರ ಕುತೂಹಲ ಕೆರಳಿಸಿದೆ.
ಹೌದು..! ಕಮಲ್ ಹಾಸನ್ ಅವರ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರವೇ ಇದ್ದು, ತಮ್ಮ ಪಕ್ಷ ಗೆದ್ದರೆ ಗೃಹಿಣಿಯರ ಮನೆಗೆಲಸಕ್ಕೂ ವೇತನ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಕಮಲ್ ಅವರ ಈ ಘೋಷಣೆ ತಮಿಳುನಾಡು ಸೇರಿದಂತೆ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಏಳು ಅಂಶಗಳುಳ್ಳ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕಮಲ್ ಹಾಸನ್ ಬಿಡುಗಡೆ ಮಾಡಿದ್ದಾರೆ.
ಕೊರೋನವೈರಸ್ ಲಸಿಕೆ ಪಡೆಯುವುದು ಜನರ ಸ್ವಯಂಪ್ರೇರಿತ ನಿರ್ಧಾರ – ಭಾರತ ಸರ್ಕಾರ
ಅದರಲ್ಲಿ ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಗಳಿಸಿದ್ರೆ ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರಿಗೂ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದಲ್ಲದೆ ಮನೆಯ ಎಲ್ಲಾ ಮಂದಿಗೆ ಕಂಪ್ಯೂಟರ್ ಜೊತೆ ಅತಿ ವೇಗದ ಇಂಟರ್ ನೆಟ್ ಆಶ್ವಾಸನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel