Vikram | ಓಟಿಟಿಯಲ್ಲೂ `ವಿಕ್ರಮ್’ ಹೊಸ ದಾಖಲೆ
ಕೊರೊನಾ ಕಾರಣದಿಂದಾಗಿ ಪ್ರೇಕ್ಷಕರು ಮತ್ತೆ ಥಿಯೇಟರ್ ಗಳಿಗೆ ಬರ್ತಾರಾ..? ಇಲ್ಲವೋ..? ಎಂಬ ಅನುಮಾನಗಳನ್ನು ಆರ್ ಆರ್ ಆರ್, ಕೆಜಿಎಫ್ 2 ಸಿನಿಮಾಗಳು ಧೂಳಿಪಟ ಮಾಡಿದ್ವು.
ಇವು ಮಾತ್ರವಲ್ಲದೇ ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳು ಕೂಡ ಈ ಸಾಲಿಗೆ ಸೇರುತ್ತವೆ.
ಕಂಟೆಂಟ್ ಇದ್ದರೇ ಸಾಕು ಪ್ರೇಕ್ಷಕರು ಖಂಡಿತವಾಗಿ ಥಿಯೇಟರ್ ಗೆ ಬರುತ್ತಾರೆ ಅನ್ನೋದು ರುಜುವಾಗಿದೆ.
ಇದರಲ್ಲಿ ಸೌತ್ ಸಿನಮಾಗಳ ಪಾತ್ರ ಮಹತ್ವದ್ದಾಗಿದೆ.
ಸೌತ್ ಸಿನಿಮಾಗಳು ಹಿಂದಿಯಲ್ಲೂ ಕೂಡ ಭಾರಿ ಕಲೆಕ್ಷನ್ಸ್ ಮಾಡಿವೆ.

ಇದೀಗ ಐಎಂಡಿಬಿ ಈ ವರ್ಷದ ಟಾಪ್ ಟೆನ್ ಮೂವೀಸ್ ಅಂಡ್ ಟಿವಿ ಷೋಗಳ ಪಟ್ಟಿಯನ್ನು ರಿಲೀಸ್ ಮಾಡಿವೆ.
ಇದರಲ್ಲಿ ಕಮಲ್ ಹಸನ್ ನಟನೆಯ ವಿಕ್ರಂ ಸಿನಿಮಾ 8.8 ರೇಟಿಂಗ್ ನೊಂದಿಗೆ ಮೊದಲ ಸ್ಥಾನದಲ್ಲಿದೆ.
ಪಟ್ಟಿ ಹೀಗಿದೆ
- ವಿಕ್ರಮ್: 8.8/10
- ಕೆಜಿಎಫ್ ಅಧ್ಯಾಯ 2: 8.5/10
- ಕಾಶ್ಮೀರ ಫೈಲ್‌ಗಳು : 8.3/10
- ಹೃದಯ: 8.1/10
- RRR : 8/10
- ಗುರುವಾರ: 7.8/10
- ಜಾಂಡ್: 7.4/10
- ಸಾಮ್ರಾಟ್ ಪೃಥ್ವಿರಾಜ್: 7.2/10
- ರನ್ವೇ 34: 7.2/10
- ಗಂಗೂಬಾಯಿ ಕಥಿಯಾವಾಡಿ: 7/10