Vikram Movie: ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ ಕಮಲ್
ಉಲಗ ನಾಯಗನ್ ಕಮಲ್ ಹಾಸನ್ ಸುಮಾರು ನಾಲ್ಕು ವರ್ಷಗಳ ನಂತರ ವಿಕ್ರಂ ಮೂಲಕ ಸ್ಟ್ರಾಂಗ್ ಕಂ ಬ್ಯಾಕ್ ಮಾಡಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ಫಾಹಾದ್ ಫಾಜಿಲ್, ಸೂರ್ಯ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
ಜೂನ್ ಮೂರರಂದು ರಿಲೀಸ್ ಆದ ಈ ಸಿನಿಮಾ ಈವರೆಗೂ 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಥಿಯೇಟರ್ ನಲ್ಲಿ ಭಾರಿ ಯಶಸ್ಸು ಕಂಡ ಈ ಸಿನಿಮಾ ಇದೀಗ ಓಟಿಟಿಯಲ್ಲೂ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಜುಲೈ 8 ರಂದು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ವಿಕ್ರಂ ಸಿನಿಮಾ ರಿಲೀಸ್ ಆಗಿದ್ದು, ದಾಖಲೆಯ ವಿವ್ಯೂಸ್ ಗಳ ಮೂಲಕ ಮುನ್ನುಗ್ಗುತ್ತಿದೆ.
![kamal-haasan-vikram-new-record saaksha tv](http://saakshatv.com/wp-content/uploads/2022/07/vikram-1-300x203.jpg)
ತೆಲುಗು, ತಮಿಳು, ಕನ್ನಡ, ಮಲಯಾಳ, ಹಿಂದಿ ಭಾಷೆಯಲ್ಲಿ ಈ ಸಿನಮಾ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಲ್ಲೂ ಬಿಗ್ಗೆಸ್ಟ್ ಓಪನಿಂಗ್ ವಿಕೆಂಡ್ ಸಾಧಿಸಿದೆ ಎಂದು ಡಿಸ್ನಿ ಹೇಳಿದೆ.
ಇಲ್ಲಿಯವರೆಗೂ ಇದ್ದ ಓಫನಿಂಗ್ ವ್ಯೂಸ್ ದಾಖಲೆಯನ್ನು ಈ ಮೂವಿ ಬ್ರೇಕ್ ಮಾಡಿದೆ. ಅಲ್ಲದೇ ಹೈಯೆಸ್ಟ್ ಸ್ರ್ಟೀಮಿಂಗ್ ನಲ್ಲೂ ಮೊದಲ ಸ್ಥಾನ ಪಡದುಕೊಂಡಿದೆ.
ಇದರ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ವಿಕ್ರಂ ಪ್ರತಿ ಮನೆಗೆ ಸೇರಿದ್ದು ಆನಂದದ ವಿಷಯ.
ಇಷ್ಟು ದೊಡ್ಡ ಯಶಸ್ಸನ್ನು ಕೊಟ್ಟ ಪ್ರೇಕ್ಷಕರಿಗೆ ಧನ್ಯವಾದಗಳು ಎಂದಿದ್ದಾರೆ.