Jr.NTR 31 | ಪ್ರಶಾಂತ್ ನೀಲ್ ಸಿನಿಮಾದಲ್ಲಿ NTR ಗೆ ಕಮಲ್ ಹಾಸನ್ ವಿಲನ್
ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾಗಳ ಮೂಲಕ ದೊಡ್ಡ ಸಂಚಲನ ಮೂಡಿಸಿದ್ದಾರೆ. ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ದೇಶದಾದ್ಯಂತ ಚಿರಪರಿಚಿತರಾಗುತ್ತಿದ್ದಾರೆ.
ಸದ್ಯ ಯಂಗ್ ರೆಬಲ್ ಸ್ಟಾರ್ ಜೊತೆ ಸಲಾರ್ ಸಿನಿಮಾ ಮಾಡುತ್ತಿರುವ ಪ್ರಶಾಂತ್ ನೀಲ್, ಎನ್ ಟಿಆರ್ ಜೊತೆಗಿನ ಪ್ರಾಜೆಕ್ಟ್ ಬಗ್ಗೆ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ.
ತಾರಕ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಪ್ರಶಾಂತ್ ‘ಹ್ಯಾಪಿ ಬರ್ತ್ಡೇ NTR31′ ಎಂಬ ಅಡಿಬರಹದೊಂದಿಗೆ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.
ಈ ಪೋಸ್ಟರ್ನಲ್ಲಿ ತಾರಕ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಿನಿಮಾ ಮಂದಿಯ ಮೆಚ್ಚುಗೆ ಮಾತ್ರವಲ್ಲದೇ ಸಾಕಷ್ಟು ಕುತೂಹಲ ಕೆರಳಿಸಿದೆ.
ಇದರ ನಡುವೆ ಈ ಸಿನಿಮಾದ ಬಗ್ಗೆ ಕ್ರೇಜಿ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಿನಿಮಾದಲ್ಲಿ ಯೂನಿವರ್ಸಲ್ ಹೀರೋ ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವಿಕ್ರಂ ಟ್ರೈಲರ್ ನಲ್ಲಿ ಕಮಲ್ ಮಾಸ್ ಅಂಡ್ ರಫ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಎನ್ ಟಿ ಆರ್ ಎದುರಿಗೆ ವಿಲನ್ ಪಾತ್ರಕ್ಕೆ ಕಮಲ್ ಸೂಕ್ತ ಎಂದು ಪ್ರಶಾಂತ್ ಭಾವಿಸಿದ್ದಾರಂತೆ.
ಚಿತ್ರದ ಕಥೆಯನ್ನು ಕಮಲ್ ಹಾಸನ್ ಕೇಳಿದ್ದು, ಅವರಿಗೂ ಕಥೆ ತುಂಬಾ ಇಷ್ಟವಾಗಿ ಓಕೆ ಅಂದಿದ್ದಾರೆ ಎಂಬ ಮಾತು ಕೇಳಿಬಂದಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. kamal-haasan-villain-prashanth-neel-ntr-31-movie