ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸ್ಫೋಟದ ಜೊತೆ ಜೊತೆಗೆ ಸದ್ದಿಲ್ಲದೆ ರಾಜಕೀಯ ಚಟುವಟಿಕೆಗಳನ್ನು ಗರಿಗೆದರಿವೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಧಾನ ಪರಿಷತ್ ನಾಮನಿರ್ದೇಶನಕ್ಕಾಗಿ ಮೂವರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದಾರೆ. ಬಿಎಸ್ ವೈ ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಹೆಚ್.ವಿಶ್ವನಾಥ್ ಹಾಗೂ ಸಿಪಿ ಯೋಗೇಶ್ವರ್ ಹೆಸರನ್ನ ಹೈಕಮಾಂಡ್ ಗೆ ಶಿಫಾರಸು ಮಾಡಿದ್ದಾರೆ. ಆದ್ರೆ ಇದರಲ್ಲಿ ಬಿಜೆಪಿ ವರಿಷ್ಠರು ಇಬ್ಬರ ಹೆಸರನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿ.ಪಿ.ಯೋಗೇಶ್ವರ್ ಓಕೆ… ವಿಶ್ವನಾಥ್ ಯಾಕೆ..?
ಸದ್ಯ ಬಿಎಸ್ ವೈ ಶಿಫಾರಸು ಮಾಡಿರುವ ಮೂವರಲ್ಲಿ ದೆಹಲಿ ವರಿಷ್ಠರು, ಭಾರತಿ ಶೆಟ್ಟಿ ಹಾಗೂ ಹೆಚ್.ವಿಶ್ವನಾಥ್ ಹೆಸರನ್ನ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಾಹಿತ್ಯ ಕ್ಷೇತ್ರದಿಂದ ಪರಿಷತ್ ಗೆ ಎಂಟ್ರಿ ಕೊಟ್ಟು, ಮಂತ್ರಿ ಆಗಬೇಕು ಎಂದು ಕನಸು ಕಂಡಿದ್ದ ಮಾಜಿ ಸಚಿವ. ಹೆಚ್ ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ. ಹಾಗೇ ಸಮಾಜ ಸೇವೆ ಕ್ಷೇತ್ರದಿಂದ ಎಂಎಲ್ಸಿ ಯಾಗುವ ಗುರಿ ಹೊಂದಿದ್ದ ಭಾರತಿ ಶೆಟ್ಟಿ ಅವರ ಕನಸೂ ಕೂಡ ಈಡೇರಿಲ್ಲ ಅಂತಾ ಹೇಳಲಾಗಿದೆ. ಇನ್ನು ಯಡಿಯೂರಪ್ಪ ಶಿಫಾರಸು ಮಾಡಿದ ಸಿಪಿ ಯೋಗೇಶ್ವರ್ ಹೆಸರು ಮಾತ್ರ ಪರಿಶೀಲನೆಯಲ್ಲಿ ದೆಹಲಿ ನಾಯಕರು ಉಳಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.








