ಕಮಲ್ ಹಾಸನ್ ಹೊಸ ಜರ್ನಿ ಆರಂಭ : ಹೊಸ ಸಿನೆಮಾ ಘೋಷಣೆ

ತಮಿಳಿನ ಖ್ಯಾತ ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಅವರು ಮತ್ತೊಂದು ಹೊಸ ಚಿತ್ರ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಯುವ ನಿರ್ದೇಶಕ ಲೋಕೇಶ್  ಕಾನಗರಾಜ್ ಅವರ ಜೊತೆಗೆ ಹೊಸ ಚಿತ್ರ ಮಾಡುತ್ತಿರುವ ಕಮಲ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಕಮಲ್ ಹಾಸನ್ ಸೇರ್ ಮಾಡಿಕೊಂಡಿರುವ ಪೋಸ್ಟರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.  ಒನ್ಸ್ ಅಪಾನ್ ಎ ಟೈಮ್ ದೇರ್ ಲಿವ್ಡ್ ಎ ಘೋಸ್ಟ್ ಎಂಬ ವಾಕ್ಯದೊಂದಿಗೆ ಗನ್ ಗಳಿಂದ ಆವೃತವಾಗಿರುವ ಅವರ ವಿಭಿನ್ನವಾದ ಚಿತ್ರ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ಕುತೂಹಲಕ್ಕೆ ದೂಡಿದೆ. ಅಲ್ಲದೇ ಟ್ವೀಟ್ ಗೆ ಕಮಲ್ ಅವರು ಕೊಟ್ಟಿರುವ ಅಡಿಬರಹವೂ ಸಹ ಖಡಕ್ ಆಗಿದೆ. “ANOTHER JOURNEY BEGINS “  ಎಂಬ ಕ್ಯಾಪ್ಷನ್ ಗಮನ ಸೆಳೆದಿದೆ.

ಇನ್ನೂ ಕೈದಿ, ಮಾನಗರಂನಂತಹ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿರುವ ಲೋಕೇಶ್ ಅವರು ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಕೂಡ ಬಿಗ್ ಸಕ್ಸಸ್ ಕಾಣುವ ನಿರೀಕ್ಷೆಯಿದೆ. ಇನ್ನೂ ಲೋಕೇಶ್ ಡೈರೆಕ್ಷನ್ ನಲ್ಲಿ ದಳಪತಿ ವಿಜಯ್ ನಟನೆಯ ಮಾಸ್ಟರ್ ಚಿತ್ರವೂ ರಿಲೀಸ್ ರೆಡಿಯಾಗಿದ್ದು, ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲದೇ ಈ ಚಿತ್ರವೂ ಭಾರೀ ಸಕ್ಸಸ್ ಕಾಣು ನಿರೀಕ್ಷೆ ಹೆಚ್ಚಾಗಿಯೇ ಇದೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This