Kanakadasa Jayanti – ದೈವ ಸಾಕ್ಷಾತಕಾರಕ್ಕೆ ಭಕ್ತಿಯೇ ಮುಖ್ಯ ವಿನಃ ವ್ಯಕ್ತಿ ಪ್ರಧಾನವಲ್ಲ – ಡಾ.ಪಟೇಲ್ ಪಾಂಡು
ಬೆಂಗಳೂರು: ಕನಕರ ಆದರ್ಶ ಭಕ್ತಿ, ಸಮಾಜದಲ್ಲಿ ಸಾಮಾನತೆ ಸಾರುವುದಕ್ಕೆ ಬಳಸಿಕೊಂಡ ಭಕ್ತಿ ಮಾರ್ಗ, ದೈವ ಸಾಕ್ಷಾತಕಾರಕ್ಕೆ ಭಕ್ತಿಯೇ ಮುಖ್ಯ, ವಿನಃ ವ್ಯಕ್ತಿ ಪ್ರಧಾನವಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿ ಗೌರವ ಕೋಶಾಧ್ಯಕ್ಷರಾದ ಡಾ.ಬಿ.ಎಮ್. ಪಟೇಲ್ ಪಾಂಡು ಅವರು ಅಭಿಪ್ರಾಯ ಪಟ್ಟರು.
ಶುಕ್ರವಾರ ನಗರದ ಮೈಸೂರು ರಸ್ತೆಯ ಶ್ರೀ ಪಟೇಲ್ ಗುಳ್ಳಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಕನಕದಾಸ ಜಯಂತಿ ಪ್ರಯಕ್ತ ಕನಕದಾಸರ ಪಟಕ್ಕೆ ಪುಷ್ಪಾರ್ಚನೆ ಮಾಡಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ಉಡುಪಿಯಲ್ಲಿ ಕನಕದಾಸರ ಭಕ್ತಿಗಿ ಸ್ವತಃ ಶ್ರೀ ಕೃಷ್ಣ ತನ್ನ ದಿಕ್ಕನ್ನು ಬದಲಾಯಿಸಿ, ಗೋಡೆಯೊಡೆದು ದರ್ಶನವನ್ನು ನೀಡಿದ್ದ ಕಥೆ ಎಲ್ಲರಿಗೂ ತಿಳಿದಿರುವ ಸಂಗತಿ. ಇದು ಹೊರತು ಪಡಿಸಿ, ಕನಕದಾಸರು ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಸೇರಿದಂತೆ ಸರಿ ಸುಮಾರು ೩೧೬ಕ್ಕೂ ಹೆಚ್ಚು ತಾತ್ವಿಕ ಹಾಗೂ ದಾರ್ಶನಿಕ ಗ್ರಂಥಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಎಲ್ಲ ಗ್ರಂಥಗಳು ಸಾರ್ವಕಾಲಿಕ ಸತ್ಯವನ್ನು ಸಾರುವ ಎಚ್ಚರಿಕೆಯ ಗಂಟೆಯಂತಿವೆ ಎಂದು ಡಾ. ಬಿ.ಎಮ್ ಪಟೇಲ್ ಪಾಂಡು ಅವರು ಹೇಳಿದರು.
ಪಟೇಲ್ ಗುಳ್ಳಪ್ಪ ಕಾಲೇಜಿನ ಸಿಇಓ ಶ್ರೀ ಬಿ ಪಿ ಹರ್ಷ ಮಾತನಾಡಿ ಕನಕದಾಸರು ನಮಗೆ ನೀಡಿದ ಭಕ್ತಿ ಮಾರ್ಗದ ಮೂಲಕ ಸಮಾಜದಲ್ಲಿ ಇರುವ ಓರೆ ಕೊರೆಗಳನ್ನು ತಿದ್ದುವ ಕಾಲ ಸನ್ನಿಹಿತವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ಸುರೇಶ್ ಮಾತನಾಡಿ ಕನಕದಾಸರು ಜೀವನದುದಕ್ಕೂ ವಿದ್ಯಾರ್ಥಿಯಂತೆ ಬದುನ್ನು ನಡೆಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದ್ದರು, ಅದಕ್ಕೆ ವಿದ್ಯಾರ್ಥಿಗಳು ಕನಕರ ಜೀವನ ಸಾರ ಅರಿತುಕೊಳ್ಳಬೇಕು ಎಂದು ಕಿವಿಮಾತು ನೀಡಿದರು.
ವಿದ್ಯಾ ಹನುಮಂತರಾಯಪ್ಪ ಹಾಗೂ ಉಪನ್ಯಾಸಕರಾದ ರಾಮಕೃಷ್ಣ ಶ್ರೀಮತಿ ಶಿವಕುಮಾರಿ ಶ್ರೀಮತಿ ಚಿಕ್ಕಮ್ಮ ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.