ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಗೆ ಕೋವಿಡ್ ಪಾಸಿಟೀವ್
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಕರೋನಾ ಕಂಟಕ ಎದುರಾಗಿದೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಕೇನ್ ವಿಲಿಯಮ್ಸನ್ ಅವರಿಗೆ ಕರೋನಾ ಪಾಸಿಟೀವ್ ಕಂಡು ಬಂದಿದೆ.
ವಿಲಿಯಮ್ಸನ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಜಾಗಕ್ಕೆ ಹಾಶಿಮ್ ರುದರ್ಫೋರ್ಡ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಟಾಮ್ ಲ್ಯಾಥಮ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ನ್ಯೂಜಿಲೆಂಡ್ ತರಬೇತುದಾರ ಗ್ಯಾರಿ ಸ್ಟೆಡ್ ಅವರು ವಿಲಿಯಮ್ಸನ್ ಕರೋನಾ ವೈರಸ್ನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಐದು ದಿನಗಳ ಕಾಲ ಐಸೋಲೇಶನ್ನಲ್ಲಿರುತ್ತಾರೆ ಎಂದು ತಿಳಿಸಿದರು. ನ್ಯೂಜಿಲೆಂಡ್ ತಂಡದ ಉಳಿದ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ.
ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಐದು ವಿಕೆಟ್ಗಳಿಂದ ಸೋಲನುಭವುಸಿತ್ತು. ಈ ಸರಣಿ ಗೆಲುವಿನ ಭರವಸೆಯನ್ನು ಉಳಿಸಿಕೊಳ್ಳಬೇಕಾದರೆ ಕಿವೀಸ್ ಎರಡನೇ ಟೆಸ್ಟ್ ಪಂದ್ಯವನ್ನ ಗೆಲ್ಲುವ ಒತ್ತಡದಲ್ಲಿದೆ. ಇದಕ್ಕೂ ಮುನ್ನ ನಾಯಕ ವಿಲಿಯಮ್ಸನ್ ತಂಡದಿಂದ ಹೊರಗುಳಿದಿರುವುದು ನ್ಯೂಜಿಲೆಂಡ್ಗೆ ದೊಡ್ಡ ಹೊಡೆತ ನೀಡಿದೆ. ನಾಯಕತ್ವದ ಹೊರತಾಗಿ, ವಿಲಿಯಮ್ಸನ್ ಬ್ಯಾಟ್ಸ್ಮನ್ ಆಗಿ ನ್ಯೂಜಿಲೆಂಡ್ಗೆ ಬಹಳ ಪ್ರಮುಖ ಆಟಗಾರಾಗಿದ್ದರು.
ವಿಲಿಮ್ಸನ್ ಬದಲಾಗಿ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಮತ್ತು ವಿಲಿಯಮ್ಸನ್ ಅವರ ಬದಲಿಯಾಗಿ ಹ್ಯಾಮಿಶ್ ರುದರ್ಫೋರ್ಡ್ ಅವರನ್ನು ಸೇರಿಸಕೊಳ್ಳಲಾಗಿದೆ ಎಂದು ಸ್ಟೇಡ್ ದೃಢಪಡಿಸಿದರು.