Kangana : ಸಂಸತ್ ಭವನವನ್ನೇ ಶೂಟಿಂಗ್ ಗಾಗಿ ಕೇಳಿದ ಕಂಗನಾ..!!
ಕಂಗನಾ ರಣೌತ್ ಏನೇ ಮಾಡಿದ್ರೂ ಸು್ದಿ , ಏನೇ ಹೇಳಿದ್ರೂ ಸುದ್ದಿ , ವಿವಾದಗಳಲ್ಲಂತೂ ಮುಂದೆ ಇರುವ ಹೆಸರೇ ಕಂಗನಾ…
ಸದ್ಯ ಧಾಕಡ್ ಸಿನಿಮಾ ಸೋತ ನಂತರ ಕಂಗನಾ ರಣೌತ್ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಯೋಪಿಕ್ ಆಗಿದೆ..
ಈ ಸಿನಿಮಾವನ್ನು ಅವರೇ ನಿರ್ದೇಶಿಸಿ, ನಟಿಸುತ್ತಿದ್ಧಾರೆ..
ಇಂದಿರಾ ಗಾಂಧಿ ಅವರ ಕಾಲದಲ್ಲಿ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಕುರಿತಾದ ಸಿನಿಮಾ ಇದಾಗಿದೆ..
ಆದ್ರೆ ಇದೀಗ ಕಂಗನಾ ಸಂಸತ್ ಭವನವನ್ನೇ ಚಿತ್ರೀಕರಣಕ್ಕಾಗಿಗೆ ಕೇಳಿಕೊಂಡಿದ್ದಾರೆ.
ತಾವು ಯಾವೆಲ್ಲ ಭಾಗದಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಹೊಂದಲಾಗಿದೆ ಎನ್ನುವ ವಿವರವನ್ನೂ ಅವರು ಕೇಳುಹಿಸಿದ್ದಾರೆ ಎನ್ನಲಾಗ್ತಿದೆ..
ನಿಯಮಗಳ ಪ್ರಕಾರ ಸರಕಾರಿ ಸ್ವಾಮ್ಯದ ಟಿವಿಗಳ ಕ್ಯಾಮೆರಾಗಳನ್ನು ಮಾತ್ರ ಒಳಗೆ ಬಿಡಲಾಗುತ್ತದೆ. ಅಲ್ಲದೇ, ಶೂಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಈ ವೇಳೆಯಲ್ಲಿ ಕಂಗನಾ ಬೇಡಿಕೆಯನ್ನು ಸರಕಾರ ನಿರಾಕರಿಸುವ ಸಾಧ್ಯತೆಯೇ ಹೆಚ್ಚಿದೆ.