ಮೈ ತೋರಿಸಿದ ಮಾತ್ರಕ್ಕೆ ಕೆಟ್ಟ ಸಿನಿಮಾ ಗೆಲ್ಲಲ್ಲ. ದೀಪಿಕಾ ಚಿತ್ರದ ಕುರಿತು ಕಂಗಾನ ವಿಮರ್ಶೆ…
ದೀಪಿಕಾ ಪಡುಕೋಣೆ ನಟನೆಯ ಗೆಹರಾಯಿಯಾ ಸಿನಿಮಾ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೋಲ್ಡ್ ದೃಶ್ಯಗಳು ಹಚ್ಚಿವೆ ಎನ್ನುವ ಕಾರಣಕ್ಕೆ ಕೆಲವರು ಈ ಸಿನಿಮಾ ಕುರಿತು ಟೀಕಿಸಿದ್ದಾರೆ. ಇನ್ನೂ ಕೆಲವರು ಮೆಚ್ಚಿಕೊಂಡಿದ್ದಾರೆ.
ಇನ್ನೂ ನಟಿ ಕಂಗಾನ ರಾಣಾವತ್ ಕೂಡ ಚಿತ್ರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಂಗಾನ ಮಾತುಗಳು ಅಂದರೆ ಅಲ್ಲಿ ಕಿರಿಕ್ ಇದ್ದೇ ಇರುತ್ತದೆ. ಮುಖಕ್ಕೆ ಹೊಡೆದಂತೆ ಮಾತನಾಡುವ ಕಂಗಾನ ಚಿತ್ರದ ಕುರಿತೂ ಇಂಥದೇ ಮಾತುಗಳನ್ನ ಆಡಿದ್ದಾರೆ.
ಫೆಬ್ರವರಿ 11 ರಂದು ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ರಿಲಿಸ್ ಆದ ಒಂದು ದಿನದ ಬಳಿಕ ಇನಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರದ ಕುರಿತುಮ ಕಂಗಾನ ವಿಮರ್ಶೇ ಬರೆದುಕೊಂಡಿದ್ದಾರೆ. ನಾನು ಕೂಡ ಕಾಲದವಳು ಈ ಬಗೆಯ ರೊಮ್ಯಾನ್ಸ್ ಗುರುತಿಸಿ, ಅರ್ಥಮಾಡಿಕೊಳ್ಳಬಲ್ಲೆ ಹೊಸ ಯುಗದ ಸಿನಿಮಾ ನಗರ ಪ್ರದೇಶದ ಸಿನಿಮಾ ಎಂಬ ಹೆಸರಿನಲ್ಲಿ ತ್ಯಾಜ್ಯವನ್ನೆಲ್ಲ ಮಾರಾಟ ಮಾಡಬೇಡಿ, ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ. ಎಷ್ಟೇ ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಮೈ ತೋರಿಸಿದರೂ ಈ ಸಿನಿಮಾ ಗೆಲ್ಲಿಸಲು ಸಾಧ್ಯವಿಲ್ಲ ಎಂದು ಕಂಗಾನ ಬರೆದುಕೊಂಡಿದ್ದಾರೆ..
ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇವಿ ನಟಿಸಿರುವ ಗೆಹರಾಯಿಯಾ ಚಿತ್ರಕ್ಕೆ ಶಕುನ್ ಭಾತ್ರ ನಿರ್ದೇಶನ ಮಾಡಿದ್ದಾರೆ. ಅನನ್ಯಾ ಪಾಂಡೆ, ಧೈರ್ಯ ಕರ್ವ ಮುಂತಾದವರು ನಟಿಸಿದ್ದಾರೆ. ದೀಪಿಕಾ ಮತ್ತು ಸಿದ್ದಾಂತ್ ನಡುವಿನ ಕಿಸ್ಸಿಂಗ್ ಮತ್ತು ಇಂಟಿಮೇಟ್ ದೃಶ್ಯಗಳು ಹಲವರ ಕಣ್ಣು ಕುಕ್ಕಿಸಿವೆ.