ನಾನು ಗಾಂಧಿವಾದಿ ಅಲ್ಲ ನೇತಾಜಿವಾದಿ – ಕಂಗನಾ
ಕಂಗನಾ ರಣಾವತ್ ಬಾಲಿವುಡ್ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬಳು. ಯಾರ ಬೆಂಬಲವೂ ಇಲ್ಲದೇ ಬಿಟೌನ್ ಪ್ರವೇಶಿಸಿ ಹೆಸರು ಮಾಡಿದಾಕೆ. ಸತತವಾಗಿ ಲೇಡಿ ಓರಿಯೆಂಟೆಡ್ ಪಾತ್ರಗಳನ್ನ ಮಾಡಿ ವೃತ್ತಿಜೀವನದಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಅದಕ್ಕೂ ಹೆಚ್ಚಾಗಿ ತಮ್ಮ ಬಿಡು ಬೀಸು ಮಾತುಗಳಿಂದ ವಿವಾದಗಳಿಗೆ ತುತ್ತಾದ ನಟಿ. ಇರಲಿ..ಇತ್ತೀಚೆಗೆ, ಕಂಗನಾ ರಣಾವತ್ ಮತ್ತೊಮ್ಮೆ ಗಾಂಧೀಜಿ ಕುರಿತು ಮತನಾಡಿ ಸುದ್ದಿಯಾಗಿದ್ದಾರೆ.
ದೆಹಲಿಯಲ್ಲಿ ಪರಿಷ್ಕೃತ ರಾಜಪಥ ಕರ್ತವ್ಯ ಪಥದ ಉದ್ಘಾಟನಾ ಸಮಾರಂಭದಲ್ಲಿ ಕಂಗನಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಗನಾ ಹೇಳಿದ್ದು.. ‘ನಾನು ಗಾಂಧಿವಾದಿ ಅಲ್ಲ.. ನೇತಾಜಿ ವಾದಿ. ಅದಕ್ಕಾಗಿಯೇ ನನ್ನ ಮಾತುಗಳಿಂದ ಅನೇಕರು ತೊಂದರೆಗೀಡಾಗಿದ್ದಾರೆ.
ಪ್ರತಿಯೊಬ್ಬರಿಗೂ ಅವರದೇ ಆದ ಆಲೋಚನಾ ಕ್ರಮವಿರುತ್ತದೆ. ಇದರಿಂದಲೇ.. ನೇತಾಜಿ, ಸಾವರ್ಕರ್ ರಂತಹ ಅನೇಕ ಕ್ರಾಂತಿಕಾರಿಗಳು ಮಾಡಿದ ಹೋರಾಟಕ್ಕೆ ಸರಿಯಾದ ಮನ್ನಣೆ ಸಿಕ್ಕಿಲ್ಲ ಎಂದು ನನಗನ್ನಿಸುತ್ತದೆ. ಒಂದು ಕೆನ್ನೆಗೆ ಬಾರಿಸಿದರೆ ಇನ್ನೊಂದು ಕೆನ್ನೆ ತೋರಿಸು ಎಂದು ಗಾಂಧಿ ಹೇಳಿದರು. ಹಾಗಾಗಿಯೇ ಉಪವಾಸ, ದಂಡಿ ಮೆರವಣಿಗೆ ಮಾಡಿ ಸ್ವಾತಂತ್ರ್ಯ ಗಳಿಸಿದೆವು ಎಂದು ಎಲ್ಲರೂ ಹೇಳುತ್ತಾರೆ. ಅದು ನಿಜವಲ್ಲ.
ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದರು. ನೇತಾಜಿ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತರಲು ಪ್ರಪಂಚದಾದ್ಯಂತ ಪ್ರಚಾರ ಮಾಡಿದರು. ಅದಕ್ಕಾಗಿ ಸೈನ್ಯವನ್ನೂ ಸಿದ್ಧಪಡಿಸಿದರು. ಹೀಗಾಗಿ ಬ್ರಿಟಿಷರ ಮೇಲೆ ಒತ್ತಡ ಹೆಚ್ಚಾಯಿತು. ಅದರಿಂದ ಅವರು ದೇಶಕ್ಕಾಗಿ ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಕಂಗಾನ ರಾಣಾವತ್ ಹೇಳಿದ್ದಾರೆ..