ಅರೆಸ್ಟ್ ಮಾಡಲು ಮನೆ ಹತ್ರ ಬಂದ್ರೆ ನನ್ನ ಮೂಡ್.. ಕಂಗನಾ ಸಂಚಲನ ಪೋಸ್ಟ್

1 min read
kangana-ranaut saaksha tv

ಅರೆಸ್ಟ್ ಮಾಡಲು ಮನೆ ಹತ್ರ ಬಂದ್ರೆ ನನ್ನ ಮೂಡ್.. ಕಂಗನಾ ಸಂಚಲನ ಪೋಸ್ಟ್

ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರಣಾವತ್ ವಿವಾದಕ್ಕೆ ಕೇರಾಫ್ ಅಡ್ರೆಸ್ ಆಗಿದ್ದಾರೆ.

ಆಕೆ ತನ್ನ ನಡವಳಿಕೆ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿ ನಿಲ್ಲುತ್ತಾರೆ.

ಕಂಗನಾ ರಣಾವತ್ ಸಿಖ್ಖರ ಬಗ್ಗೆ ವಿವಾದಾದ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಆ ಹೇಳಿಕೆಯಿಂದಾಗಿ ಆಕೆಯ ವಿರುದ್ಧ ಪೊಲೀಸ್ ಕೇಸ್ ಕೂಡ ದಾಖಲಾಗಿದೆ.

ಇತ್ತೀಚೆಗಷ್ಟೇ ಮೋದಿ ಸರ್ಕಾರ ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಘೋಷಿಸಿರುವುದು ಗೊತ್ತಿರುವ ಸಂಗತಿ.

kangana-ranaut saaksha tv

ಕೇಂದ್ರದ ನಿರ್ಣಯದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಆದ್ರೆ ರೈತರನ್ನು ಉದ್ದೇಶಿಸಿ, ಇದು “ಖಾಲಿಸ್ತಾನಿ ಚಳುವಳಿ” ಎಂದು ಕಂಗನಾ ಪೋಸ್ಟ್ ಮಾಡಿದ್ದರು.

ಇದರಿಂದ ಕೋಪಗೊಂಡ ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ಕಂಗನಾ ವಿರುದ್ಧ ಸಬರ್ಬನ್ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಅವರ ದೂರಿನ ಮೇರೆಗೆ ಪೊಲೀಸರು ಸೋಮವಾರ ಎಫ್‍ಐಆರ್ ದಾಖಲಿಸಿದ್ದಾರೆ.

ಇದೀಗ ಈ ಎಫ್ ಐಆರ್ ವಿಚಾರವಾಗಿ ಇನ್ ಸ್ಟಾದಲ್ಲಿ ಕಂಗನಾ ಮತ್ತೊಂದು ಪೋಸ್ಟ್ ಮಾಡಿದ್ದು, ಮತ್ತೆ ವಿವಾದವನ್ನು ಮೇಲೆ ಎಳೆದುಕೊಂಡಿದ್ದಾರೆ.

ಇನ್ಸ್ಟಾ ಸ್ಟೋರಿಯಲ್ಲಿ ಕಂಗನಾ, ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡು ಬೋಲ್ಡ್ ಆಗಿರುವ ಫೋಟೋವನ್ನು ಹಂಚಿಕೊಳ್ಳುತ್ತಾ.. ಇನ್ನೊಂದು ದಿನ ಮತ್ತೊಂದು ಎಫ್‍ಐಆರ್. ನನ್ನನ್ನು ಬಂಧಿಸಲು ಬಂದರೆ ನನ್ನ ಮನೆ ಬಳಿ ನನ್ನ ಮೂಡ್”ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd