Kangana Ranaut : ಮದ್ವೆ ಬಗ್ಗೆ ಕಂಗನಾ ಶಾಕಿಂಗ್ ಕಾಮೆಂಟ್ಸ್
ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ಏನು ಮಾಡಿದರೂ ಏನು ಹೇಳಿದರೂ ಅದು ಸನ್ ಸೇಷನ್ ಆಗುತ್ತದೆ. ಇದೀಗ ತಮ್ಮ ಮದುವೆಯ ಬಗ್ಗೆ ಕಂಗನಾ ಹೇಳಿರುವ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ಕಾಂಟ್ರವರ್ಸಿ ಲಾಕಪ್ ಶೋ ಮುಗಿಸಿರುವ ಕಂಗನಾ ಸದ್ಯದಲ್ಲೇ ಧಕಡ್ ಎಂಬ ಸಿನಿಮಾ ಮೂಲಕ ತೆರೆಗೆ ಬರಲಿದ್ದಾರೆ. ಚಿತ್ರದಲ್ಲಿ ಅವರು ಏಜೆಂಟ್ ಅಗ್ನಿ ಎಂಬ ಗೂಢಚಾರಿಕೆ ಪಾತ್ರವನ್ನು ನಿರ್ವಹಿಸಿದ್ದಾರೆ.
ಸಿನಿಮಾ ಪ್ರಚಾರದ ಭಾಗವಾಗಿ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಕಂಗನಾ ರಣಾವತ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ನೀವು ರಿಯಲ್ ಲೈಫ್ ನಲ್ಲಿ ಟಾಮ್ ಬಾಯ್ ತರಹ ಇದ್ದೀರಾ ಎಂದು ಕೇಳಿದಾಗ.. ‘ನಿಜ ಜೀವನದಲ್ಲಿ ನಾನು ಯಾರಿಗೆ ಹೊಡೆದಿದ್ದೇನೆ ಎಂಬುದನ್ನ ತೋರಿಸಿ, ನೀವು ಇಂತಹ ವದಂತಿಗಳನ್ನು ಹರಡಿಸುತ್ತಿರುವುದರಿಂದಲೇ ನನಗೆ ಇನ್ನೂ ಮದುವೆಯಾಗುತ್ತಿಲ್ಲ. ನಾನು ಎಲ್ಲರೊಂದಿಗೆ ಜಗಳವಾಡುತ್ತೇನೆ ಎಂದು ಜನರು ಭಾವಿಸುತ್ತಾರೆ, ಎಂದು “ಅವಳು ನಗುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.
kangana-ranaut-talking about-marriage