ಯಾಮಿಯನ್ನ ರಾಧೆ ಮಾಗೆ ಹೋಲಿಸಿದಕ್ಕೆ ನಟನನ್ನ ಜಿರಳೆ ಎಂದು ಚಪ್ಪಲಿ ‘ಕಾಂಟ್ರವರ್ಸಿ ಕ್ವೀನ್’
ಮುಂಬೈ: ಇತ್ತೀಚೆಗೆ ಬಾಲಿವುಡ್ ನಟಿ ಯಾಮಿ ತಮ್ಮ ಬಹುಕಾಲದ ಗೆಳೆಯನ ಜೊತೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರು , ಸೆಲೆಬ್ರಿಟಿಗಳು ಯಾಮಿಗೆ ಶುಭ ಹಾರೈಸುತ್ತಿದ್ದಾರೆ. ಈ ನಡುವೆ ನಟ ವಿಕ್ರಾಂತ್ ಮೆಸ್ಸಿ ಯಾಮಿ ಅವರು ವಧುವಿನ ಅವತಾರವನ್ನ ವಿವಾದಾತ್ಮಕ ಸ್ವಯಂ ಘೋಷಿತ ದೇವತೆ ರಾಧೆ ಮಾಗೆ ಹೋಲಿಸಿದ್ದಾರೆ.
ಹೀಗೆ ರಾಧೆ ಮಾಗೆ ಹೋಲಿಕೆ ಮಾಡಿದ್ದಕ್ಕೆ ನಟಿ ಕಂಗನಾ ರಣಾವತ್ ಕಿಡಿಕಾರಿದ್ದಾರೆ. ಯಾಮಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದ ಮದುವೆಯ ಫೋಟೋಗೆ ಕಮೆಂಟ್ ಮಾಡಿದ್ದ ನಟನ ಕಮೆಂಟ್ ಗೆ ರಿಪ್ಲೈ ಮಾಡಿರುವ ಕಂಗನಾ, ನನ್ನ ಚಪ್ಪಲಿ ಕೊಡು ಎಂದು ಕೆಂಡಕಾರಿದ್ದಾರೆ.
ಅಂದ್ಹಾಗೆ ಕಂಗನಾ ರಣಾವತ್, ಹಿಮಾಚಲ ಪ್ರದೇಶದ ವಧು ಗಾರ್ಜಿಯಸ್ ಮತ್ತು ನೋಡಲು ದೇವಿಯ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಯಾಮಿ ಫೋಟೋಗೆ ಕಮೆಂಟ್ ಮಾಡಿದ್ದರು. ಇದೇ ಫೋಟೋಗೆ ವಿಕ್ರಾಂತ್ ಮೆಸ್ಸಿ, ಶುದ್ಧ ಮತ್ತು ಪವಿತ್ರ, ನೋಡಲು ಅಚ್ಚು ರಾಧೆ ಮಾ.. ಎಂದು ಬರೆದುಕೊಂಡಿದ್ದರು. ಈ ಕಮೆಂಟ್ ಗೆ ಪ್ರತಿಕ್ರಿಯಿಸಿರುವ ಕಂಗನಾ, ಎಲ್ಲಿಂದ ಬಂತು ಈ ಜಿರಳೆ, ನನ್ನ ಚಪ್ಪಲಿಯನ್ನ ಕೊಡಿ ಎಂದು ಹೇಳಿದ್ದಾರೆ. ಅಂದ್ಹಾಗೆ ಜೂನ್ 4ರಂದು ಯಾಮಿ ಹಿಮಾಚಲ ಪ್ರದೇಶದಲ್ಲಿ ಚಿತ್ರದ ನಿರ್ದೇಶಕ, ರೈಟರ್ ಆದಿತ್ಯ ಅವರ ಜೊತೆ ಸರಳವಾಗಿ ಮದುವೆಯಾದ್ರು.








