ಅಮೀರ್ ಖಾನ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ವಿಚ್ಛೇಧನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.. ಅಮಿರ್ ಖಾನ್ ತೀವ್ರ ಟೀಕೆಗೆ , ಟ್ರೋಲ್ ಗೆ ಗುರಿಯಾಗಿದ್ದಾರೆ. ಈ ನಡುವೆ ಎಲ್ಲಾ ವಿರಾದಲ್ಲೂ ಮೂಗು ತೂರಿಸದೇ ಹೋದ್ರೆ ಸಮಾಧಾನವಾಗದ ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಕಂಗನಾ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನದ ಬಗ್ಗೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘವಾಗಿ ಬರೆದುಕೊಂಡಿರುವ ಕಂಗನಾ, ಹಿಂದು ಮತ್ತು ಮುಸ್ಲಿಂ ಅಂತರಧರ್ಮೀಯ ವಿವಾದವಾದರೆ ಮಕ್ಕಳು ಯಾಕೆ ಕೇವಲ ಮುಸ್ಲಿಂ ಧರ್ಮಕ್ಕೆ ಸೇರುತ್ತಾರೆ. ಮಹಿಳೆಯರು ಹಿಂದೂ ಆಗಿ ಮುಂದುವರೆಯಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
‘ಒಂದು ಹಂತದಲ್ಲಿ ಪಂಜಾಬ್ನಲ್ಲಿ ಹೆಚ್ಚಿನ ಕುಟುಂಬಗಳು ಒಬ್ಬ ಮಗನನ್ನು ಹಿಂದೂ ಮತ್ತು ಇನ್ನೊಬ್ಬ ಮಗನನ್ನು ಸಿಖ್ ಆಗಿ ಬೆಳೆಸುತ್ತಿದ್ದರು. ಆಮೀರ್ ಖಾನ್ ಸರ್ ಅವರ 2ನೇ ವಿಚ್ಛೇದನ ನನಗೆ ಆಶ್ಚರ್ಯವಾಯಿತು. ಅಂತರಧರ್ಮೀಯ ಮದುವೆಯಲ್ಲಿ ಮಕ್ಕಳು ಏಕೆ ಮುಸ್ಲಿಂಮರು ಮಾತ್ರ ಆಗುತ್ತಾರೆ. ಮಹಿಳೆಯರು ಯಾಕೆ ಹಿಂದೂಗಳಾಗಿ ಮುಂದುವರೆಯಲು ಸಾಧ್ಯವಿಲ್ಲ..?’ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ‘ಬದಲಾಗುತ್ತಿರುವ ಈ ಸಮಯದಲ್ಲಿ ನಾವು ಇದನ್ನು ಬದಲಾಯಿಸಬೇಕು. ಇದು ಪುರಾತನ ಮತ್ತು ಹಿಂಜರಿತವಾಗಿದೆ. ಒಂದು ಕುಟಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರಿಗೆ ಯಾಕೆ ಸಾಧ್ಯವಿಲ್ಲ. ಮುಸ್ಲಿಮರನ್ನು ಮದುವೆಯಾಗಲು ಧರ್ಮ ಯಾಕೆ ಬದಲಾಯಿಸಬೇಕು..?’ ಎಂದು ಬರೆದುಕೊಂಡಿದ್ದಾರೆ.