ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ  ಕಾವ್ಯಾ ಶಾಸ್ತ್ರಿ

1 min read

ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ  ಕಾವ್ಯಾ ಶಾಸ್ತ್ರಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕ್ಯಾವ್ಯಾ ಶಾಸ್ತ್ರಿ ಅವರು ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೂದಲು ದಾನಮಾಡಿ ಮಾದರಿಯಾಗಿದ್ದಾರೆ.. ಕಾವ್ಯಾ ಅವರ ಸಮಾಜಮುಖಿ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿರುವ ನಟಿ , ಕ್ಯಾನ್ಸರ್ ರೋಗಿಗಳಿಗಾಗಿ ನಾನು ಕೂದಲನ್ನು ದಾನ ಮಾಡಿದ್ದೇನೆ. ಕ್ಯಾನ್ಸರ್‌ ನಿಂದ ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೇನೆ. ಆ ನೋವನ್ನು ತುಂಬ ಹತ್ತಿರದಿಂದ ಕಂಡಿದ್ದರಿಂದ ಈ ನಿರ್ಧಾಕ್ಕೆ ಬಂದಿದ್ದೇನೆ.

ಕೂದಲು ದಾನ ತುಂಬ ಸಣ್ಣ ಕೆಲಸವೇ ಇರಹುದು. ಆದರೆ, ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಈ ಒಂದೊಳ್ಳೆ ಕೆಲಸಕ್ಕೆ ನೀವು ಕೈ ಜೋಡಿಸಿ ಎಂದು ಮನವಿ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಕೂದಲು ಕಟ್ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.  ಕಾವ್ಯಾ ಅವರ ಸಮಾಜಮುಖಿ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd