‘ಪಂಜಾಬ್ ಭಯೋತ್ಪಾದಕ ಚಟುವಟಿಕೆಯ ತಾಣವಾಗ್ತಿದೆ’ : ಕಂಗನಾ
ಬೇಡದೇ ಇರೋ ವಿಚಾರಗಳಿಗೇ ಮೂಗು ತೂರಿಸುವ ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಜೆಪಿ ಮೇಲೆ ಅದೇನೋ ಪ್ರೀತಿ.. ಸದಾ ಬಿಜೆಪಿಗೆ ಸಪೋರ್ಟ್ ಮಾಡ್ತಾ ಪ್ರತಿಪಕ್ಷಗಳ ನಾಯಕರನ್ನ ತೆಗಳುತ್ತಾ , ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನ ಹೊಗಳುತ್ತಾ , ಕೇಂದ್ರದ ನಡೆ ವಿರೋಧಿಸುವವರನ್ನ ತೆಗಳುತ್ತಾ ಬಿಜೆಪಿಯ ಅನಧಿಕೃತ ವಕ್ತಾರೆಯಂತೆ ವರ್ತಿಸು ಕಂಗನಾ ಈಗ ಪಂಜಾಬ್ ಜನರ ಬಗ್ಗೆ ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ..
ಇತ್ತೀಚೆಗೆ ನರೇಂದ್ರ ಮೋದಿ ಅವರು ಪಂಜಾಬ್ ಗೆ ಸಂಚರಿಸಿದ್ದಾಗ ಅವರ ವಾಹನಕ್ಕೆ ಅಡ್ಡಿ ಪಡಿಸಲಾಗಿತ್ತು.. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ಆಯೋಜಿತವಾಗಿದ್ದ ಚುನಾವಣೆ ಪ್ರಚಾರಕ್ಕೆ ಮೋದಿ ಆಗಮಿಸುವಾಗ ಹುಸೇನಿವಾಲದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಒಂದರ ಮೇಲೆ ಮೋದಿ ಅವರಿದ್ದ ಕಾರು ಹಾಗೂ ಅವರ ಬೆಂಗಾವಲು ಪಡೆಯ ಕಾರುಗಳನ್ನು ಪ್ರತಿಭಟನಾಕಾರರು ತಡೆದರು. ಇದು ದೊಡ್ಡ ಭದ್ರತಾ ಲೋಪ ಎಂದು ಪ್ರಧಾನಿ ಕಾರ್ಯಾಲಯವು ಆರೋಪ ಮಾಡಿದೆ.
ಅಲ್ಲದೇ ಅನೇಕರು ಈ ವಿರುದ್ಧ ಆಕ್ರೋಶ ಹೊರಹಾಕಿದ್ದು , ಪಂಜಾಬ್ ಸರ್ಕಾರದ ವಿರುದ್ಧ ಕಿಡಿಕಾರುತ್ತಾ , ಭದ್ರತಾ ಲೋಪದ ವಿಚಾರವಾಗಿ ಅಲ್ಲಿನ ಸರ್ಕರವನ್ನ ಟೀಕೆ ಮಾಡಿದ್ದಾರೆ.. ಇದೇ ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಕಂಗನಾ ರಣಾವತ್ ಅವರು ‘ಈ ಘಟನೆ ಪ್ರಜಾಪ್ರಭುತ್ವದ ಮೇಲಿನ ದಾಳಿ’ ಎಂದಿದ್ಧಾರೆ..
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ ಕಂಗನಾ ರನೌತ್, ‘ಪಂಜಾಬ್‌ನಲ್ಲಿ ನಡೆದ ಘಟನೆ ತಲೆತಗ್ಗಿಸುವಂಥಹದ್ದು. ಪ್ರಧಾನಿ ಮೋದಿಯವರು ಸಾಂವಿಧಾನಿಕವಾಗಿ ಆಯ್ಕೆ ಆಗಿರುವ ಗೌರವಾನ್ವಿತ ವ್ಯಕ್ತಿ. 120 ಕೋಟಿ ಭಾರತೀಯರ ಪ್ರತಿನಿಧಿ. ಅವರ ಮೇಲೆ ಆಗಿರುವ ಈ ದಾಳಿ, ಪ್ರತಿ ಭಾರತೀಯನ ಮೇಲೆ ಆಗಿರುವ ದಾಳಿ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಆಗಿರುವ ದಾಳಿ’ ಎಂದಿದ್ದಾರೆ.
ಅಲ್ಲದೇ ‘ಪಂಜಾಬ್ ರಾಜ್ಯವು ಭಯೋತ್ಪಾದಕ ಚಟುವಟಿಕೆಯ ತಾಣವಾಗುತ್ತಿದೆ. ನಾವು ಈಗಲೇ ಅವರನ್ನು ತಡೆಯದಿದ್ದರೆ ದೇಶವು ದೊಡ್ಡ ಬೆಲೆಯನ್ನು ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ’ ಎಂದಿದ್ದಾರೆ. ಜೊತೆಗೆ ‘ಭಾರತವು ಮೋದಿ ಅವರ ಜೊತೆಗಿದೆ’ (#India Is with Modi) # ಟ್ಯಾಗ್ ಬಳಸಿದ್ದಾರೆ.