ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದಲೂ ಈ ವಿಚಾರದಲ್ಲಿ ಅನೇಕ ಚರ್ಚೆಗಳು ತಾರಕಕ್ಕೇರಿವೆ. ನೆಪೋಟಿಸಮ್ ಆರೋಪ ತೀವ್ರವಾಗಿದ್ದು, ಪ್ರಕರಣದ ಹಿಂದೆ ದೊಡ್ಡ ಡೊಡ್ಡ ಮಂದಿ ಕೈವಾಡವಿದೆ ಎಂಬುವ ಆರೋಪಕಗಳು ವ್ಯಾಪಕವಾಗಿ ಕೇಳಿ ಬರ್ತಿವೆ. ಪ್ರಮುಖವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಸುಶಾಂತ್ ರದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ವಾದಿಸುತ್ತಲೇ ಬಂದಿದ್ದಾರೆ. ಅದ್ರಲ್ಲೂ ಕಂಗನಾ ಪ್ರಮುಖವಾಗಿ ಬಾಲಿವುಡ್ ನ ನಿರ್ಮಾಪಕ ಕರಣ್ ಜೋಹರ್ ವಿರುದ್ಧ ತೀವ್ರವಾಗಿ ಆರೋಪಿಸುತ್ತಲೇ ಬಂದಿದ್ದು, ಇದೀಗ ಮತ್ತೊಂದು ಹೊಸ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ನ ಪ್ರಭಾವಿಗಳ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಕಂಗನಾ ಇದೀಗ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಹರಿಹಾಯ್ದಿದ್ದಾರೆ. 
ವಿವಾದಾತ್ಮಕ ನಿರ್ಮಾಪಕ ಕರಣ್ ಜೋಹರ್ ಅವರ ಮ್ಯಾನೇಜರ್‌ಗೆ ಕೂಡ ಸಮನ್ಸ್ ಕಳಹಿಸಲಾಗಿದೆ, ಅಗತ್ಯ ಬಿದ್ದರೆ ಕರಣ್ ಜೋಹರ್ ಅವರನ್ನು ಸಹ ವಿಚಾರಣೆ ಮಾಡಲಾಗುವುದಾಗಿ ಹೇಳಲಾಗಿದೆ. ಆದರೆ ಮುಂಬೈ ಪೊಲೀಸರ ಈ ಕ್ರಮ ತೀವ್ರ ಟೀಕೆಗೆ ಒಳಗಾಗಿದೆ. ಇಲ್ಲಿ ಆರೋಪ ಬಂದಿರುವುದೇ ಕರಣ ಜೋಹರ್ ಮೇಲೆ. ಆದರೆ ಅವರನ್ನು ವಿಚಾರಣೆ ಮಾಡದೆ ಅವರ ಮ್ಯಾನೇಜರ್ ಅನ್ನು ಕರೆಸಲಾಗಿದೆ. ಹೀಗಾಗಿಯೇ ಪೊಲೀಸರ ಈ ನಡೆ ವಿರುದ್ಧ ಕಿಡಿಕಾರಿರುವ ಕಂಗನಾ ಸಮನ್ಸ್ ನೀಡುವುದರಲ್ಲಿಯೂ ಸ್ವಜನಪಕ್ಷಪಾತ ಸಮನ್ಸ್ ನೀಡುವುದರಲ್ಲಿಯೂ ಮುಂಬೈ ಪೊಲೀಸರು ನಾಚಿಕೆ ಇಲ್ಲದವರಂತೆ ಸ್ವಜನಪಕ್ಷಪಾತ ಮಾಡಲು ಹೇಗೆ ಸಾಧ್ಯ? ಪೊಲೀಸರು ಕಂಗನಾಗೆ ಸಮನ್ಸ್ ನೀಡಿದ್ದಾರೆಯೇ ವಿನಾ ಆಕೆಯ ಮ್ಯಾನೇಜರ್‌ಗೆ ಅಲ್ಲ. ಆದರೆ ಮುಖ್ಯಮಂತ್ರಿಯ ಮಗನ ಆತ್ಮೀಯ ಗೆಳೆಯನ ಮ್ಯಾನೇಜರ್‌ನನ್ನು ಪ್ರಶ್ನಿಸಲು ಕರೆಸಲಾಗಿದೆ. ಏಕೆ? ಇದರಿಂದ ಸಾಹೇಬರಿಗೆ ಕಷ್ಟವಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕಂಗನಾ ಸುಶಾಂತ್ ಸಿಂಗ್ ಪ್ರಕರಣದಲ್ಲಿ ತಮಾಷೆ ಮಾಡುವುದನ್ನ ನಿಲ್ಲಿಸಿ. ಕರಣ್ ಜೋಹರ್ ಮ್ಯಾನೇಜರ್ ಗೆ ಸಮನ್ಸ್ ನೀಡಲಾಗಿದೆ. ಆದ್ರೆ ಸಿಎಂ ಪುತ್ರ ಆದಿತ್ಯ ಠಾಕ್ರೆಯವರ ಬೆಸ್ಟ್ ಫ್ರೆಂಡ್ ಆದ ಕರಣ್ ಜೋಹರ್ ಗೆ ಯಾಕೆ ಸಮನ್ಸ್ ನೀಡಿಲ್ಲ. ಸುಶಾಂತ್ ಸಿಂಗ್ ಪ್ರಕರಣವನ್ನು ನಗೆಪಾಟಲಿಗೀಡು ಮಾಡುವುದನ್ನ ಬಿಡಿ ಎಂದು ಮುಂಬೈ ಪೊಲಿಸರ ವಿರುದ್ಧ ಹರಿಹಾಯ್ದಿದ್ದಾರೆ ಕಂಗನಾ. ಅಷ್ಟೇ ಅಲ್ಲ ಈ ರೀತಿ ಟ್ವಿಟ್ ಮಾಡುವ ಮೂಲಕ ಆದಿತ್ಯ ಠಾಕ್ರೆ ಕರಣ್ ಜೋಹರ್ ಬೆಸ್ಟ್ ಫ್ರೆಂಡ್ ಎಂಬ ಸಂಗತಿ ಬಯಲು ಮಾಡಿದ್ದಾರೆ.








