ಕನ್ನಡ ಬಿಗ್ ಬಾಸ್ ಸೀಸನ್ -6 ರಲ್ಲಿ ಪ್ರತಿಯೋಗಿಯಾಗಿದ್ದ ಧನರಾಜ್ ಅವರು ಸದ್ಯ ತಂದೆಯಾದ ಸಂಭ್ರದಲ್ಲಿದ್ದಾರೆ. ಇತ್ತೀಚಿಗಷ್ಟೆ ಧನರಾಜ್ ಸಂತಸದ ಸುದ್ದಿಯನ್ನು ಹಂಚಿಕೊಂಡು ಪತ್ನಿ ಶಾಲಿನಿಯ ಸೀಮಂತದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ರು. ಇದೀಗ ಧನರಾಜ್ ಅವರ ಮನೆಗೆ ಪುಟ್ಟ ಕಂದಮ್ಮ ಎಂಟ್ರಿ ಕೊಟ್ಟಿದ್ದು ಪರಿವಾರದವರಲ್ಲಿ ಸಂತಸ ಮನೆಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಇಮದು ಶಾಲಿನಿ ಗಂಡು ಮಗುಗಿಗೆ ಜನ್ಮ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ ಗೆ ಕಾಮನ್ ಮ್ಯಾನ್ ಆಗಿ ಎಂಟ್ರಿಕೊಟ್ಟಿದ್ದ ಧನರಾಜ್ ಅವರು ಅಷ್ಟರ ಮಟ್ಟಿಗೆ ಜನರಿಗೆ ಚಿರಪರಿಚಿತವಾಗಿರಲಿಲ್ಲ. ಆದ್ರೆ ಸೀಸನ್ ಮುಗಿಯುವ ಹೊತ್ತಿಗೆ ಅತ್ಯಂತ ಖ್ಯಾತಿ ಪಡೆದಿದ್ದರು. ಅಂದ್ಹಾಗೆ ಧನರಾಜ್ ಹಾಗೂ ಶಾಲಿನಿ ಅವರದ್ದು ಪ್ರೇಮವಿವಾಹ. ಈ ಬಗ್ಗೆ ಧನರಾಜ್ ಸಾಕಷ್ಟು ಬಾರಿ ಬಿಗ್ ಬಾಸ್ ಮನೆಯಲ್ಲೂ ಹೇಳಿಕೊಂಡಿದ್ದಾರೆ.
ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ
ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ‘ವಿಕ್ರಂ ವೇದ’...