ಬಂಡಾಯ ಕವಿ ಡಾ. ಸಿದ್ದಲಿಂಗಯ್ಯ : ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ನಿಮಗಿದೋ ನಮನ

ಬಂಡಾಯ ಕವಿ ಡಾ. ಸಿದ್ದಲಿಂಗಯ್ಯ : ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ನಿಮಗಿದೋ ನಮನ

Dr. Siddhalingaiah saakshatvಕನ್ನಡ ಸಾಹಿತ್ಯ ಲೋಕದ ಅಪರೂಪದ ಆಸ್ತಿ ಕರಗಿಹೋಗಿದೆ. ಕನ್ನಡ ಬಂಡಾಯ ಸಾಹಿತ್ಯದ ಸೂರ್ಯ ಇಂದು ಅಸ್ತಂಗತನಾಗಿದ್ದಾನೆ. ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಧ್ವನಿ ಇದೀಗ ಶಾಶ್ವತಮೌನಕ್ಕೆ ಜಾರಿದೆ. ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎನ್ನುತ್ತಾ ಸಮ ಸಮಾಜದ ಕನಸು ಕಂಡ, ಸಮಾಜದ ಅಂಕು ಡೊಂಕುಗಳನ್ನ ತಮ್ಮ ಸಾಹಿತ್ಯದ ಮೂಲಕ ಪ್ರಸ್ತುತಪಡಿಸಿದ್ದ ಕವಿ ಡಾ.ಸಿದ್ದಲಿಂಗಯ್ಯ ಇನ್ನಿಲ್ಲ. ನಾನು ಸಾವಿನೊಂದಿಗೆ ಕುಸ್ತಿಯಾಡಿದ್ದೇನೆ ಎನ್ನುತ್ತಾ ಬಂಡಾಯ ಸಾಹಿತಿ, ಕವಿ ಡಾ. ಸಿದ್ದಲಿಂಗಯ್ಯ ಇಹಲೋಕ ತ್ಯಜಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಸಿದ್ದಲಿಂಗಯ್ಯ ಅವರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಶುಕ್ರವಾರ ಸಂಜೆ 4.45 ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Related posts

No Content Available

Dr. Siddhalingaiah saakshatv ಇಕ್ಕರ್ಲಾ ಒದಿರ್ಲಾ ಎಂದೇ ಬಂಡಾಯ ಸಾಹಿತ್ಯದ ಮೂಲಕ ಜನಪ್ರಿಯರಾದ ಡಾ. ಸಿದ್ದಲಿಂಗಯ್ಯ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆಯವರು. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿದ್ದ ಸಿದ್ದಲಿಂಗಯ್ಯ, ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.

ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಸಿದ್ದಲಿಂಗಯ್ಯ, ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿ ದಲಿತ ಕವಿ ಎಂದೇ ಹೆಸರು ಪಡೆದವರು. ಅಧ್ಯಾಪಕರಾಗಿ, ಕವಿಗಳಾಗಿ, ಹೋರಾಟಗಾರರಾಗಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಅವರ ಸೇವೆ ಅಪಾರ. ಅಂದಹಾಗೆ ಇವರು ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಕೂಡ ಆಗಿದ್ದರು.

Dr. Siddhalingaiah saakshatvಸಿದ್ದಲಿಂಗಯ್ಯ ಅವರು ‘ಹೊಲೆಮಾದಿಗರ ಹಾಡು’, ‘ಮೆರವಣಿಗೆ’, ‘ಸಾವಿರಾರು ನದಿಗಳು’, ‘ಕಪ್ಪು ಕಾಡಿನ ಹಾಡು’, ‘ನನ್ನ ಜನಗಳು’ ಸೇರಿದಂತೆ ಹಲವು ಕವನ ಸಂಕಲಗಳನ್ನು ಹೊರತಂದಿದ್ದಾರೆ. ‘ಊರು-ಕೇರಿ’ ಎಂಬ ಆತ್ಮಕಥನವನ್ನು ರಚಿಸಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತು ಅಕಾಡೆಮಿ ಪ್ರಶಸ್ತಿ, ನಾಡೋಜ, ನೃಪತುಂಗ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ದೊರೆತಿವೆ.

ಕನ್ನಡ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ಡಾ. ಸಿದ್ದಲಿಂಗಯ್ಯ ಇಂದು ದೈಹಿಕವಾಗಿ ನಮ್ಮನ್ನೆಲಾ ಅಗಲಿರಬಹುದು, ಆದ್ರೆ ಸಾಹಿತ್ಯದ ಮೂಲಕ ಅವರು ನಮ್ಮಲ್ಲಿ ಎಂದಿಗೂ ಶಾಶ್ವತವಾಗಿರುತ್ತಾರೆ. ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ಸಿದ್ದಲಿಂಗಯ್ಯ ಅವರಿಗೆ ನಮ್ಮ ಅಂತಿಮ ನಮನ..

Join us on: